ಎರಡು ವಾರ ಪೂರೈಸಿದ ‘ಲವ್’ ಸಿನಿಮಾ

Love Movie Review: When romance met reality- Cinema express

ಮಹೇಶ್ ಅಮ್ಮಲಿದೊಡ್ಡಿ ನಿರ್ದೇಶನದ ‘ಲವ್’ ಸಿನಿಮಾ ಅಂದುಕೊಂಡಂತೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಸ ಕಲಾವಿದರ ಪ್ರತಿಭೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ.

ಜಾತಿ, ಧರ್ಮ ಯಾವುದನ್ನು ಲೆಕ್ಕಿಸದೆ ಪ್ರೀತಿಸುವ ಜೋಡಿಗಳ ಕಥೆ ಇದಾಗಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಈ ಚಿತ್ರ ಇದೀಗ ಎರಡು ವಾರಗಳನ್ನು ಪೂರೈಸುವ ಮೂಲಕ ರಾಜ್ಯದಾದ್ಯಂತ ಹೌಸ್ ಫುಲ್ ಆಗಿದೆ. ಈ ಸಂತಸವನ್ನು ಹಂಚಿಕೊಳ್ಳಲು ಚಿತ್ರತಂಡ ಇಂದು ಚಾಮರಾಜನಗರ, ಮೈಸೂರು, ಕೆ ಆರ್ ನಗರ, ಚನ್ನರಾಯಪಟ್ಟಣದಲ್ಲಿ ಸಕ್ಸಸ್ ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾಲಭೈರವ ಮೂವಿ ಮೇಕರ್ಸ್ ಬ್ಯಾನರ್ ನಡಿ, ದಿವಾಕರ್ ಎಸ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ್ ಪ್ರಮುಖ ಪಾತ್ರದಲ್ಲಿದ್ದು, ಸಾಯಿ ಕಿರಣ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇದೊಂದು ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ ಸಿನಿಮಾವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read