ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ನ ತೀವ್ರ ಕೊರತೆ ಮುಂದುವರೆದಿದ್ದು, ವಿದ್ಯುತ್ ಬೇಡಿಕೆ ಸರಾಸರಿ 15 ಸಾವಿರ ಮೆಗಾ ವ್ಯಾಟ್ ತಲುಪಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಸರಾಸರಿ 15 ಸಾವಿರ ಮೆ. ವ್ಯಾಟ್ ತಲುಪಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲಾಗದೇ ನಿತ್ಯ 3 ಸಾವಿರದಿಂದ 4 ಸಾವಿರ ಮೆ. ವ್ಯಾಟ್ ನಷ್ಟು ವಿದ್ಯುತ್ ಕಡಿಮೆ ಬಳಸುವ ಮೂಲಕ ಅನಧಿಕೃತ ಲೋಡ್ ಶೆಡ್ಡಿಂಗ್ ಗೆ ಇಂಧನ ಇಲಾಖೆ ಮುಂದಾಗಿದೆ.
ವಿದ್ಯುತ್ ಕಡಿತದ ಬಗ್ಗೆ ಕೆಪಿಟಿಸಿಎಲ್ ಅನಧಿಕೃತ ಕರ್ಟೈಲ್ ಮೈಂಟ್ ಆದೇಶವಾಗಿದೆ ಎನ್ನಲಾಗಿದ್ದು, ವಿದ್ಯುತ್ ಕಡಿತ ಮಾಡಿ ಎಸ್ಕಾಂ ಗ್ರಿಡ್ ನಿಂದ ಎಷ್ಟು ವಿದ್ಯುತ್ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅನಧಿಕೃತ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.