ಆಘಾತಕಾರಿ ಘಟನೆಯೊಂದರಲ್ಲಿ ನಾಪತ್ತೆಯಾಗಿದ್ದ 13 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಭಾನುವಾರದಂದು ಸ್ಥಳೀಯ ಮದರಸಾದಿಂದ ಹಿಂತಿರುಗುವಾಗ ನಾಪತ್ತೆಯಾಗಿದ್ದ 13 ವರ್ಷದ ಬಾಲಕಿಯ ವಿರೂಪಗೊಂಡ ಶವ ಲಖಿಂಪುರ ಖೇರಿ ಜಿಲ್ಲೆಯ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ.
ವರದಿಯ ಪ್ರಕಾರ ಬಾಲಕಿಯ ಬಾಯಲ್ಲಿ ಕೆಸರು ತುಂಬಿದ್ದು ಅವಳನ್ನು ಹಿಂಸಿಸಿ ಸಾಯಿಸುವ ಮೊದಲು ಅವಳ ಕಣ್ಣುಗಳನ್ನು ಕಬ್ಬಿನಿಂದ ಚುಚ್ಚಲಾಗಿತ್ತು. ವೈದ್ಯರ ತಂಡ ಶವಪರೀಕ್ಷೆ ಮಾಡಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂತ್ರಸ್ತೆಯ ಕುಟುಂಬದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ತಡರಾತ್ರಿಯಾದರೂ ಆಕೆ ವಾಪಸ್ ಬಾರದೆ ಇರುವುದರಿಂದ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಮರುದಿನ ಬೆಳಿಗ್ಗೆ ಗ್ರಾಮಸ್ಥರು ಬಾಲಕಿಯ ಛಿದ್ರಗೊಂಡ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು.
ಫೊರೆನ್ಸಿಕ್ ತಂಡವು ಸಾಕ್ಯ್ಗಗಳನ್ನು ಸಂಗ್ರಹಿಸುತ್ತಿದೆ. ಆಕೆಯ ಖಾಸಗಿ ಅಂಗಗಳ ಬಳಿ ಏಟುಗಳು ಕಂಡುಬಂದಿದ್ದು, ಲೈಂಗಿಕ ದೌರ್ಜನ್ಯದ ದೃಢೀಕರಣಕ್ಕಾಗಿ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
https://twitter.com/kheripolice/status/1711597788218212482?ref_src=twsrc%5Etfw%7Ctwcamp%5Etweetembed%7Ctwterm%5E1711597788218212482%7Ctwgr%5Efd826e8a9f12af71437050a7f1a3f41e4ad257f3%7Ctwcon%5Es1_&ref_url=https%3A%2F%2Fwww.india.com%2Futtar-pradesh%2Fmud-in-mouth-eyes-pierced-with-sugarcane-stacks-13-year-old-girl-brutally-murdered-in-ups-lakhimpur-kheri-6404319%2F