alex Certify ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಆನ್ಲೈನ್ ನಲ್ಲೇ SSLC ಅಂಕಪಟ್ಟಿ ತಿದ್ದುಪಡಿಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಆನ್ಲೈನ್ ನಲ್ಲೇ SSLC ಅಂಕಪಟ್ಟಿ ತಿದ್ದುಪಡಿಗೆ ಅವಕಾಶ

ಬೆಂಗಳೂರು: ಆನ್ಲೈನ್ ನಲ್ಲೇ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆ, ತಾಯಿ ಹೆಸರು, ಜನ್ಮ ದಿನಾಂಕ ಇತರೆ ತಪ್ಪುಗಳಿದ್ದಲ್ಲಿ ಆನ್ಲೈನ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅನೇಕ ಸೇವೆಗಳನ್ನು ಡಿಜಿಟಲೀಕರಣ ಮಾಡಿದ್ದು, ಅಂಕಪಟ್ಟಿ ಡಿ ಆನ್ಲೈನ್ ಮೂಲಕ ಅಂಕಪಟ್ಟಿ ತಿದ್ದುಪಡಿ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಯು ಓದಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪೂರಕ ದಾಖಲೆ ಸಲ್ಲಿಸಬೇಕು. ಮುಖ್ಯ ಶಿಕ್ಷಕರು ಮಂಡಳಿಯ ವೆಬ್ಸೈಟ್ ಮೂಲಕ ಶಾಲಾ ಲಾಗಿನ್ ನಲ್ಲಿ ಪ್ರಸ್ತಾವನೆ ಸಲ್ಲಿಸಬಹುದು. ಮುಂದಿನ ಒಂದು ತಿಂಗಳ ಅವಧಿಗೆ ಮಾತ್ರ ಭೌತಿಕ ಅರ್ಜಿ ಸ್ವೀಕರಿಸಲಿದ್ದು, ನಂತರ ಆನ್ಲೈನ್ ಮೂಲಕವೇ ಅರ್ಜಿ ಸ್ವೀಕರಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...