HomeKarnatakaMysore Dasara 2023 : ಅ. 16 ರಿಂದ ದಸರಾ ಚಲನಚಿತ್ರೋತ್ಸವ ಆರಂಭ, 112 ಸಿನಿಮಾಗಳ...

Mysore Dasara 2023 : ಅ. 16 ರಿಂದ ದಸರಾ ಚಲನಚಿತ್ರೋತ್ಸವ ಆರಂಭ, 112 ಸಿನಿಮಾಗಳ ಪ್ರದರ್ಶನ

ಮೈಸೂರು :   ಚಲನಚಿತ್ರೋತ್ಸವ ಉಪಸಮಿತಿಯು ಅಕ್ಟೋಬರ್ 16 ರಿಂದ ಅಕ್ಟೋಬರ್ 22 ರವರೆಗೆ ಚಲನಚಿತ್ರೋತ್ಸವ  ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದೆ.

ಈ ಅವಧಿಯಲ್ಲಿ ಐನಾಕ್ಸ್ ಮತ್ತು ಡಿಆರ್ ಸಿ ಸಿನೆಮಾಸ್ ನಲ್ಲಿ ಒಟ್ಟು 112 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಚಲನಚಿತ್ರಗಳಲ್ಲಿ ಕಮರ್ಷಿಯಲ್ ಹಿಟ್ಸ್, ಆರ್ಟ್ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳು ಸೇರಿವೆ. ವಿಶ್ವ ಚಲನಚಿತ್ರ ವಿಭಾಗದಲ್ಲಿ 18 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, 30 ಕನ್ನಡ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಅ.15ರಂದು ಚಲನಚಿತ್ರೋತ್ಸವವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನ ಹಲವು ತಾರೆಯರನ್ನು ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular