ಬೆಂಗಳೂರು : ಅಕ್ಟೋಬರ್ 11ರ ಇಂದಿನಿಂದ ಅಕ್ಟೋಬರ್ 13ರವರೆಗೆ ಬೆಳಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ಈ ಕೆಳಗಿನ ಜಿಲ್ಲೆಗಳಲ್ಲಿ ಪಡಿತರ ಕಾರ್ಡುಗಳ ತಿದ್ದುಪಡಿಗೆ ಆಹಾರ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಡಿಬಿಟಿ ಯೋಜನೆಗೆ ಸಂಬಂಧಿಸಿದಂತೆ, ಪಡಿತರ ಚೀಟಿಗಳ ಎನ್‌ಪಿಸಿಐ ಬ್ಯಾಂಕ್ ವೆರಿಪಿಕೇಶನ್ ಮತ್ತು ಆಧಾರ್ ಅಥೆಂಟಿಕೇಶನ್ ಪೇಲ್ಡ್ ಪ್ರಕರಣಗಳ ಕುಟುಂಬದ ಮುಖ್ಯಸ್ಥರು ಸಂಬಂಧಿಸಿದ ಬ್ಯಾಂಕುಗಳಿಗೆ ಭೇಟಿ ನೀಡಿ ಬ್ಯಾಂಕ ಖಾತೆಗಳನ್ನು ಸರಿಪಡಿಸಿಕೊಳ್ಳಲು ತಿಳಿಸಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಡುದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದೆ.
ಈ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ
ಬಳ್ಳಾರಿ
ಕಲಬುರಗಿ
ಬೀದರ್
ಚಿಕ್ಕಬಳ್ಳಾಪುರ
ಚಿತ್ರದುರ್ಗ
ದಾವಣಗೆರೆ
ಕೋಲಾರ
ಕೊಪ್ಪಳ
ರಾಯಚೂರು
ರಾಮನಗರ
ಶಿವಮೊಗ್ಗ
ತುಮಕೂರು
ಯಾದಗಿರಿ
ವಿಜಯಪುರ