ಮೈಸೂರು : ಅಕ್ಟೋಬರ್ 22 ಹಾಗೂ 23ರಂದು ಏರ್ ಶೋ ನಡೆಯಲಿದೆ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್ಶೋ ನಡೆಯುತ್ತಿದ್ದು, ಅ.22ರಂದು ಏರ್ಶೋ ರಿಹರ್ಸಲ್, 23ರಂದು ಮುಖ್ಯ ಏರ್ಶೋ ನಡೆಯಲಿದೆ. ಅ.23ರ ಸಂಜೆ 4 ಗಂಟೆಗೆ 45 ನಿಮಿಷ ಏರ್ಶೋ ನಡೆಯಲಿದೆ ಎಂದು ಮಾಹಿತಿ ನೀಡಿದರು.
ದಸರಾ ಮಹೋತ್ಸವದ ಸಂದರ್ಭದಲ್ಲಿ ಏರ್ ಶೋ ನಡೆಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿತ್ತು. ನಾಡಹಬ್ಬ ದಸರಾ ಅಕ್ಟೋಬರ್ 15 ರಂದು ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 24 ರಂದು ವಿಶ್ವವಿಖ್ಯಾತ ಜಂಬೂ ಸವಾರಿಯೊಂದಿಗೆ ಮುಕ್ತಾಯಗೊಳ್ಳಲಿದೆ.
ದಸರಾ ಮಹೋತ್ಸವದ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನ ನಡೆಸಲು ಅನುಮತಿ ಕೋರಿ ರಾಜ್ಯ ಸರ್ಕಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪ್ರಸ್ತಾವನೆ ಕಳುಹಿಸಿದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಅದಕ್ಕೆ ಅನುಮೋದನೆ ನೀಡಿದೆ. ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ವಾಯುಪಡೆಯ ಅಧಿಕಾರಿಗಳೊಂದಿಗೆ ಬನ್ನಿ ಮಂಟಪ ಮೈದಾನಕ್ಕೆ ಭೇಟಿ ನೀಡಿ ಪ್ರದರ್ಶನದ ಸಿದ್ಧತೆಗಳನ್ನು ಪ್ರಾರಂಭಿಸಿದ್ದರು.ಯುವ ದಸರಾ ಅಂಗವಾಗಿ ಅಕ್ಟೋಬರ್ 16 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಆಚರಣೆಯ ಭಾಗವಾಗಿ ಜನರನ್ನು ರಂಜಿಸಲು ರಾಜ್ಯದಾದ್ಯಂತದ ಹಲವಾರು ಕಲಾವಿದರು ಮೈಸೂರಿಗೆ ಆಗಮಿಸಲಿದ್ದಾರೆ.