ಬೆಂಗಳೂರು : ವೈದ್ಯರ ಎಡವಟ್ಟಿಗೆ ಬೆಂಗಳೂರಲ್ಲಿ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಕೋಣನಕುಂಟೆಯಲ್ಲಿ ನಿವಾಸಿ ಪ್ರೀತಮ್ ನಾಯ್ಕ್ (10) ಎಂಬ ಬಾಲಕ ಮೃತಪಟ್ಟಿದ್ದು, ಪೋಷಕರು ಆಸ್ಪತ್ರೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ
ತೀವ್ರವಾಗಿ ಜ್ವರ ಬಂದ ಹಿನ್ನೆಲೆ ಬಾಲಕ ಪ್ರೀತಮ್ ನನ್ನು ಕೋಣನಕುಂಟೆ ಬಳಿಯ ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪರಿಶೀಲನೆ ನಡೆಸಿದ ಅಲ್ಲಿನ ವೈದ್ಯರು ಒಂದು ಇಂಜೆಕ್ಷನ್ ನೀಡಿದ್ದಾರೆ. ವಾಪಸ್ಸು ಮನೆಗೆ ಬಂದ ಬಳಿಕ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಬಾಲಕನಿಗೆ ನೋವು ಉಂಟಾಗಿದೆ ಎನ್ನಲಾಗಿದೆ.
ನಂತರ ಪೋಷಕರು ಮರುದಿನವೇ ಮತ್ತೆ ಅದೇ ರಾಜನಂದಿನಿ ಆಸ್ಪತ್ರೆಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಮತ್ತೆ ಕೆಲವು ಔಷಧಿ ನೀಡಿ ವೈದ್ಯರು ಬಾಲಕನನ್ನು ಮನೆಗೆ ಕಳುಹಿಸಿದ್ದಾರೆ. ನೋವು ಕಡಿಮೆ ಆಗದೆ ಕಾಲು ಊತ ಬಂದಿದ್ದು, ಬಾಲಕ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೋಷಕರು ಆಸ್ಪತ್ರೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆಯಿಂದಷ್ಟೇ ಘಟನೆ ಬಗ್ಗೆ ಸತ್ಯಾನುಸತ್ಯತೆ ಹೊರಬರಬೇಕಾಗಿದೆ.
ಸಾಂದರ್ಭಿಕ ಚಿತ್ರ