HomeEntertainmentಭಗವಾನ್ ಶ್ರೀರಾಮನ ಪಾತ್ರಕ್ಕಾಗಿ ಮದ್ಯಪಾನ - ಮಾಂಸ ಸೇವನೆ ತ್ಯಜಿಸಲಿದ್ದಾರಂತೆ ರಣಬೀರ್ ಕಪೂರ್ !

ಭಗವಾನ್ ಶ್ರೀರಾಮನ ಪಾತ್ರಕ್ಕಾಗಿ ಮದ್ಯಪಾನ – ಮಾಂಸ ಸೇವನೆ ತ್ಯಜಿಸಲಿದ್ದಾರಂತೆ ರಣಬೀರ್ ಕಪೂರ್ !

ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ಅವರ ರಾಮಾಯಣ ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡದಿದ್ದರೂ ಹೊಸ ವರದಿಯೊಂದರಲ್ಲಿ ರಾಮನ ಪಾತ್ರ ಮಾಡುವ ರಣಬೀರ್ ಮದ್ಯಪಾನ ಮತ್ತು ಮಾಂಸಸೇವನೆಯಿಂದ ದೂರವಿರಲಿದ್ದಾರೆ ಎಂದು ಹೇಳಿದೆ.

ರಾಮನ ಪಾತ್ರ ಮಾಡುವುದರಿಂದ ಅವರಂತೆ ಶುದ್ಧ ಸಸ್ಯಹಾರಿಯಾಗಿರಲು, ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಿನಿಮಾ ಚಿತ್ರೀಕರಣ ಮುಗಿಯುವವರೆಗೆ ಮದ್ಯಸೇವನೆ ಮತ್ತು ಮಾಂಸ ಸೇವನೆಯಿಂದ ದೂರವಿರುವುದಾಗಿ ರಣಬೀರ್ ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ನಟಿಸಲಿರುವ ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿಯವರೊಂದಿಗೆ ರಣಬೀರ್ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ವದಂತಿಗಳಿವೆ.

ರಣಬೀರ್ ಪಬ್ಲಿಕ್ ಇಮೇಜ್ ಗಾಗಿ ಮದ್ಯ ಮತ್ತು ಮಾಂಸವನ್ನು ತ್ಯಜಿಸುತ್ತಿಲ್ಲ, ಆದರೆ ಭಗವಾನ್ ರಾಮನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಈ ರೀತಿ ನಿರ್ಧರಿಸಿದ್ದಾರೆಂದು ಮೂಲವೊಂದು ತಿಳಿಸಿದೆ.

“ಚಿತ್ರದ ಚಿತ್ರೀಕರಣ ನಡೆಯುವಾಗ ರಣಬೀರ್ ಸಂಪೂರ್ಣವಾಗಿ ಮದ್ಯಪಾನ ಮತ್ತು ಮಾಂಸಾಹಾರವನ್ನು ತ್ಯಜಿಸುತ್ತಾರೆ. ಇವುಗಳನ್ನು ಅವರು ತಮ್ಮ ಸಾರ್ವಜನಿಕ ಇಮೇಜ್‌ಗಾಗಿ ಮಾಡುತ್ತಿಲ್ಲ. ಆದರೆ ಬದ್ಧತೆಯ ನಟ ರಣಬೀರ್ ಶ್ರೀರಾಮನಂತೆ ಶುದ್ಧತೆಯನ್ನು ಅನುಭವಿಸಲು ಬಯಸುತ್ತಾರೆ. ಅದೇನೇ ಇರಲಿ ರಣಬೀರ್ ತಡರಾತ್ರಿ ಮತ್ತು ವೈಲ್ಡ್ ಪಾರ್ಟಿಗಳಲ್ಲಿ ಭಾಗವಹಿಸುವುದಿಲ್ಲ” ಎಂದು ಮೂಲಗಳು ಹೇಳಿವೆ.

ಈ ಹಿಂದೆ ರಣಬೀರ್ ಮತ್ತು ಸಹ ಕಲಾವಿದರು ಫೆಬ್ರವರಿ 2024 ರಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ. ಚಿತ್ರದ ಮೊದಲ ಭಾಗದಲ್ಲಿ ಭಗವಾನ್ ರಾಮ ಮತ್ತು ಸೀತೆಯ ಕಥೆಯ ಮೇಲೆ ಹೆಚ್ಚು ಗಮನಹರಿಸಲಾಗುತ್ತದೆ ಎಂದು ತಿಳಿದುಬಂದಿತ್ತು.

ಏತನ್ಮಧ್ಯೆ ರಣಬೀರ್ ತಮ್ಮ ಮುಂಬರುವ ಚಿತ್ರ ಅನಿಮಲ್ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ರಣಬೀರ್ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular