ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದ ವಿಚಾರದಲ್ಲಿ ಟ್ವೀಟ್ ಮಾಡಿದ ಬಳಿಕ ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ತನ್ನ ಕೆಲಸ ಕಳೆದುಕೊಂಡಿದ್ದಾರೆ. ಪಾಲೆಸ್ತೀನ್ ಗೆ ಬೆಂಬಲ ನೀಡಿದ ಮಿಯಾ ಖಲೀಫಾಳನ್ನ ಕೆನಡಾದ ನಿರ್ಮಾಪಕ, ರೇಡಿಯೋ ಹೋಸ್ಟ್ ಟಾಡ್ ಶಪಿರೊ ಕೆಲಸದಿಂದ ವಜಾಗೊಳಿಸಿದ್ದಾರೆ.
ಇಸ್ರೇಲ್ ನಲ್ಲಿ ಹಮಾಸ್ ಉಗ್ರರ ದಾಳಿಯ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ ಮಿಯಾ ಖಲೀಫಾ “”ಪ್ಯಾಲೆಸ್ತೀನ್‌ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಯಾರಾದರೂ ತಮ್ಮ ಫೋನ್‌ಗಳನ್ನು ತಿರುಗಿಸಲು ಮತ್ತು ಅಡ್ಡಲಾಗಿ ಚಿತ್ರಿಸಲು ಹೇಳಬಹುದೇ” ಎಂದು ಅವರು ಟ್ವೀಟ್ ಮಾಡಿದ್ದರು.
ಆಕೆಯ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ರೆಡ್ ಲೈಟ್ ಹಾಲೆಂಡ್ ಕಂಪನಿಯ ಸಿಇಒ ಟಾಡ್ ಶಪಿರೊ ಅವರು ಅಸಹ್ಯಕರ ಟೀಕೆಗಳಿಗಾಗಿ ಕಂಪನಿಯ ಸಲಹಾ ಪಾತ್ರದಿಂದ ನಿಮ್ಮನ್ನು ವಜಾಗೊಳಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಮಿಯಾ ಖಲೀಫಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಟಾಡ್ ಶಪಿರೊ “ಇದೊಂದು ಭಯಾನಕ ಟ್ವೀಟ್ @miakhalifa. ನಿಮ್ಮನ್ನು ತಕ್ಷಣವೇ ವಜಾಗೊಳಿಸಲಾಗಿದೆ ಎಂದು ನೀವು ಪರಿಗಣಿಸಿ. ಇದು ಅಸಹ್ಯವನ್ನು ಮೀರಿದ ಅಭಿಪ್ರಾಯ. ದಯವಿಟ್ಟು ಉತ್ತಮ ಮಾನವರಾಗಿ. ನೀವು ಸಾವು, ಅತ್ಯಾಚಾರ, ಹೊಡೆತ ಮತ್ತು ಒತ್ತೆಯಾಳುಗಳನ್ನು ಮನ್ನಿಸುತ್ತಿರುವಿರಿ ಎಂಬುದು ನಿಜವಾಗಿಯೂ ಖೇದಕರ. ನಿಮ್ಮ ಅಜ್ಞಾನವನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ವಿಶೇಷವಾಗಿ ದುರಂತದ ಮುಖಾಂತರ ಮನುಷ್ಯರು ಒಗ್ಗೂಡುವ ಅಗತ್ಯವಿದೆ. ನೀವು ಉತ್ತಮ ವ್ಯಕ್ತಿಯಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಆದಾಗ್ಯೂ, ಇದು ನಿಮಗೆ ತುಂಬಾ ತಡವಾಗಿದೆ ಎಂದು ಸ್ಪಷ್ಟವಾಗಿ ತೋರುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ಗೆ ನುಗ್ಗಿ ಹಮಾಸ್ ಭಯೋತ್ಪಾದಕರು ದಾಳಿ ನಡೆಸುತ್ತಿದ್ದು ಇದುವರೆಗೂ 1200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಪರಿಸ್ಥಿತಿ ಉಲ್ಬಣಗೊಂಡಿದೆ.
https://twitter.com/miakhalifa/status/1710663220619313397?ref_src=twsrc%5Etfw%7Ctwcamp%5Etweetembed%7Ctwterm%5E1710663220619313
https://twitter.com/miakhalifa/status/1710722638975279537?ref_src=twsrc%5Etfw%7Ctwcamp%5Etweetembed%7Ctwterm%5E1710722638975279537%7Ctwgr%5E52dbb2d2c0a215392f76228ed1d897017e92e40b%7Ctwcon%5Es1_&ref_url=https%3A%2F%2Fwww.unilad.com%2Fcelebrity%2Fnews%2Fmia-khalifa-fired-from-job-after-posting-israel-hamas-548816-20231009