ಬೆಂಗಳೂರು: ಮುಂಜಾನೆಯಿಂದ ಮೋಡಕವಿದ ವಾತಾವರಣವಿದ್ದ ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ವೇಳೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.
ಸಂಜೆ ವೇಳೆ ದಿಢೀರ್ ಆರಂಭವಾದ ವರುಣಾರ್ಭಟಕ್ಕೆ ಹಲವೆಡೆ ರಸ್ತೆ ಮಾರ್ಗಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ.
ಆರ್. ಆರ್. ನಗರ, ನಾಯಂಡಹಳ್ಳಿ,ಹೊಸಕೆರೆಹಳ್ಳಿ, ಗಿರಿನಗರ, ಮೈಸೂರು ರಸ್ತೆ, ರಾಜಾಜಿನಗರ, ವಿಜಯನಗರ ಸೇರಿದಂತೆ ಹಲವೆಡೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ರಾತ್ರಿ ವೇಳೆಗೆ ಇನ್ನಷ್ಟು ವರುಣಾರ್ಭಟ ಜೋರಾಗುವ ಸಾಧ್ಯತೆ ದಟ್ಟವಾಗಿದ್ದು, ಕಚೇರಿಂದ ಮನೆಗೆ ತೆರಳುವವರು ಮಳೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ.