ನವದೆಹಲಿ: ಪುನರ್ ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ ಸಭೆ ಸೇರಲಿದ್ದು, ಜಾತಿ ಗಣತಿ, ಅದರ ಪರಿಣಾಮಗಳು, ಚುನಾವಣಾ ತಂತ್ರ ಮತ್ತು ನಿರ್ವಹಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್ ಹಿಂದೂಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಮತ್ತು ಅಲ್ಪಸಂಖ್ಯಾತರ ವಿರೋಧಿ ನಿಲುವು ತೆಗೆದುಕೊಳ್ಳುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ದಾಳಿಯನ್ನು ಎದುರಿಸಲು ಜಾತಿ ಗಣತಿ ನಿರೂಪಣೆಯನ್ನು ಸರಿಯಾಗಿ ಪಿಚ್ ಮಾಡಬೇಕೆಂಬುದು ಕಾಂಗ್ರೆಸ್ ನ ಕೆಲವು ನಾಯಕರ ಅಭಿಪ್ರಾಯವಾಗಿದೆ.
ಜಾತಿ ಗಣತಿಗೆ ಕಾಂಗ್ರೆಸ್‌ನ ದೃಢ ಬೆಂಬಲವನ್ನು ಪಕ್ಷದ ಉನ್ನತ ವೇದಿಕೆಯಲ್ಲಿ ಚರ್ಚಿಸಲಾಗುವುದು. ಹೊಸದಾಗಿ ನಿರ್ಮಿಸಲಾದ ಇಂಡಿಯಾ ಬ್ಲಾಕ್ ಅಡಿಯಲ್ಲಿ ಚುನಾವಣಾ ಕಾರ್ಯತಂತ್ರ, ಸೀಟು ಹಂಚಿಕೆ ಬದ್ಧತೆಗಳು ಮತ್ತು ಚುನಾವಣಾ ನಿರ್ವಹಣೆಯ ಕುರಿತು ಚರ್ಚೆಯೂ ನಡೆಯುವ ನಿರೀಕ್ಷೆಯಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಮತ್ತು ಇತರ ಹಿರಿಯ ನಾಯಕರೊಂದಿಗೆ CWC ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾಗವಹಿಸಲಿದ್ದಾರೆ.