ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಮೂರ್ಚೆ ಬಂದಂತೆ ಫ್ರಾಂಕ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪ್ರಜ್ವಲ್ (23) ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫ್ರಾಂಕ್ ವಿಡಿಯೋ ಮಾಡುವ ಪ್ರಜ್ವಲ್ ಮೆಟ್ರೋದಲ್ಲಿ ಕೂಡ ಫ್ರಾಂಕ್ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಅಲ್ಲದೇ ಈತನಿಗೆ 500 ರೂ ದಂಡ ಕೂಡ ವಿಧಿಸಲಾಗಿದೆ.
ಪ್ರಜ್ವಲ್ ವಿಜಯನಗರದಿಂದ ಮೆಜೆಸ್ಟಿಕ್ಗೆ ಬರುವ ಪರ್ಪಲ್ ಲೈನ್ ಮೆಟ್ರೋದಲ್ಲಿ ಯೂಟ್ಯೂಬರ್ ಎಸ್ಕಲೇಟರ್ ಮೇಲೆ ಯೂಟ್ಯೂಬರ್ ಪ್ರ್ಯಾಂಕ್ ವೀಡಿಯೋ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ್ದಾನೆ. ಅಲ್ಲದೇ ಚಲಿಸುತ್ತಿದ್ದ ಮೆಟ್ರೋದಲ್ಲಿ ಮೂರ್ಛೆ ಬಂದವನಂತೆ ಪ್ರ್ಯಾಂಕ್ ಮಾಡಿದ್ದನು.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಫ್ರಾಂಕ್ ಮಾಡಿದ ಯುವಕನ ವಿಳಾಸ ಪತ್ತೆ ಹಚ್ಚಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಗೋವಿಂದರಾಜು ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಪ್ರಜ್ಜು ವಿರುದ್ಧ ದೂರು ದಾಖಲಿಸಿ 500 ರೂ ದಂಡ ವಿಧಿಸಿದ್ದರು.