42ನೇ ವಸಂತಕ್ಕೆ ಕಾಲಿಟ್ಟ ‘ಆ ದಿನಗಳು’ ಖ್ಯಾತಿಯ ನಟಿ ಅರ್ಚನಾ ಶಾಸ್ತ್ರಿ

ಬಹುಭಾಷಾ ನಟಿ ಅರ್ಚನಾ ಶಾಸ್ತ್ರಿ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2004ರಲ್ಲಿ ತೆರೆಕಂಡ ತೆಲುಗಿನ ತಪನ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಅರ್ಚನಾ ಶಾಸ್ತ್ರಿ 2007ರಲ್ಲಿ ಬಿಡುಗಡೆಯಾದ ಕೆಎಂ ಚೈತನ್ಯ ನಿರ್ದೇಶನದ ʼಆ ದಿನಗಳುʼ ಸಿನಿಮಾದಲ್ಲಿ ಚೇತನ್ ಜೊತೆ ನಾಯಕಿಯಾಗಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟರು. ನಂತರ ಮಿಂಚು, ಮೇಘವರ್ಷಿಣಿ, ಮೈತ್ರಿ ಸೇರಿದಂತೆ ಸಾಕಷ್ಟು ಕನ್ನಡದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಜನಿಸಿದ ಇವರು ತೆಲುಗು ಸೇರಿದಂತೆ ಸುಮಾರು ಐದು ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ವರ್ಷ ’10th ಕ್ಲಾಸ್ ಡೈರಿಸ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ ಶಾಸ್ತ್ರಿ  ಇತ್ತೀಚಿಗೆ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ.ಇಂದು ತಮ್ಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read