VIRAL VIDEO | ಬೈಕ್ ಕೊಟ್ಟರೆ ಮಾತ್ರ ತಾಳಿ ಕಟ್ಟುವುದಾಗಿ ಪಟ್ಟು ಹಿಡಿದ ವರ ; ಆತನ ಮುಂದೆಯೇ ಹಸೆಮಣೆಯಿಂದಲೇ ಎದ್ದು ಹೋದ ವಧು

ಇಲ್ಲೋರ್ವ ವರ ಮಹಾಶಯ ವಧುವಿನ ಮನೆಯವರು ಬುಲೆಟ್ ಬೈಕ್ ಕೊಡುವವರೆಗೂ ತಾಳಿ ಕಟ್ಟಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದು, ವರನ ಬೇಡಿಕೆಗೆ ಬೇಸತ್ತ ವಧು ಹಸೆಮಣೆಯಿಂದಲೇ ಎದ್ದು ಹೋದ ಘಟನೆ ನಡೆದಿದೆ.

ಅದ್ದೂರಿ ಮದುವೆ ಸಮಾರಂಭ……ಇನ್ನೇನು ವರ ವಧುವಿನ ಕೊರಳಿಗೆ ತಾಳಿ ಕಟ್ಟುವ ಸಮಯ…. ಆದರೆ ಹಸೆಮಣೆಯ ಮೇಲೆ ಕುಳಿತಿದ್ದ ವರಮಹಾಶಯ ತಾಳಿಕಟ್ಟದೇ ಕ್ಯಾತೆ ತೆಗೆದಿದ್ದಾನೆ. ತನಗೆ ಹುಡುಗಿಯ ಮನೆಯವರು ಬುಲೆಟ್ ಬೈಕ್ ಕೊಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಕೊಟ್ಟಿಲ್ಲ. ಅವರು ಬುಲೆಟ್ ಬೈಕ್ ಕೊಟ್ಟರೆ ಹುಡುಗಿಯನ್ನು ಮದುವೆಯಾಗುತ್ತೇನೆ ಅಲ್ಲಿಯವರೆಗೂ ತಾಳಿಕಟ್ಟಲ್ಲ ಎಂದು ಹಠ ಹಿಡಿದು ಕುಳಿತಿದ್ದಾನೆ.

ವರನ ಬೇಡಿಕೆಗಳಿಗೆ ವಧು ಕಂಗಾಲಾಗಿದ್ದಾಳೆ. ಇದೇ ವೇಳೆ ಮದುವೆ ಮಂಟಪದ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ವಧು ಹಣೆಗೆ ಕುಂಕುಮವಿಟ್ಟು ಆಕೆಯನ್ನು ಟ್ರ್ಯಾಕ್ಟರ್ ನಲ್ಲಿ ಕರೆದೊಯ್ದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read