ನಾನು ಬೆತ್ತಲೆಯಾಗಿದ್ದಾಗ ನರ್ಸ್, ವೈದ್ಯರು ಫೋಟೋ, ವಿಡಿಯೋ ಮಾಡಿಕೊಂಡಿದ್ದರು ಎಂದು ತಮಿಳು ನಟ ಸಿದ್ದಾರ್ಥ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಚಿಕ್ಕು ಸಿನಿಮಾ ಸುದ್ದಿಗೋಷ್ಟಿಯಲ್ಲಿ ತಮ್ಮ ಜೀವನದಲ್ಲಿ ನಡೆದ ಘಟನೆ ಬಗ್ಗೆ ನಟ ಸಿದ್ದಾರ್ಥ್ ಮಾತನಾಡಿದ್ದಾರೆ.
ನಾನು ಆಸ್ಪತ್ರೆಯಲ್ಲಿ ಎಕ್ಸ್ ರೇಗೆಂದು ಹೋಗಿದ್ದಾಗ ನಾನು ಬೆತ್ತಲಾಗಿದ್ದೆ, ಈ ವೇಳೆ ಆಸ್ಪತ್ರೆ ವೈದ್ಯರು ಹಾಗೂ ಅಲ್ಲಿದ್ದ ನರ್ಸ್ ಗಳು ನನ್ನ ಫೋಟೋ, ವಿಡಿಯೋ ಮಾಡಿಕೊಂಡಿದ್ದಾರೆ. ಪ್ಲೀಸ್ ಸರ್ ಒಂದು ಫೋಟೋ ಎಂದು ನನ್ನ ಫೋಟೋ ತೆಗೆದುಕೊಂಡಿದ್ದಾರೆ ಎಂದರು. ಇಂತಹ ವಿಷಯಗಳು ನನಗೆ ಇಷ್ಟ ಆಗೋದಿಲ್ಲ, ಇದನ್ನು ಬಳಸಿಕೊಂಡು ಕೆಲವರು ಬ್ಯುಸಿನೆಸ್ ಮಾಡಿ ಹಣ ಮಾಡುತ್ತಾರೆ ಎಂದರು. ನನಗೆ ಈ ಸೋಶಿಯಲ್ ಮೀಡಿಯಾಗಳಂದ್ರೆನೆ ಭಯ. ಕೆಲವರಂತೂ ಸೋಶಿಯಲ್ ಮೀಡಿಯಾವನ್ನು ಕೆಟ್ಟದಾಗಿ ಬಳಕೆ ಮಾಡುತ್ತಾರೆ ಎಂದರು.
ತಮಿಳು ನಟ ಸಿದ್ದಾರ್ಥ್ ನಟನೆಯ ‘ಚಿಕ್ಕು’ ಸಿನಿಮಾದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರು ಅಡ್ಡಿಪಡಿಸಿದ್ದರು.ಕನ್ನಡ ಅವತರಣಿಕೆ ಪ್ರದರ್ಶನ ಮತ್ತು ಪತ್ರಿಕಾಗೋಷ್ಠಿ ಮಲ್ಲೇಶ್ವರಂನ ಎಸ್.ಆರ್.ವಿ. ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಿದ್ದಾರ್ಥ್ ಸುದ್ದಿಗೋಷ್ಠಿ ನಡೆಸುವ ವೇಳೆ ಏಕಾಏಕಿ ನುಗ್ಗಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿದ್ದರು. ಇದು ಭಾರಿ ಸುದ್ದಿಯಾಗಿತ್ತು.