ಬೆಂಗಳೂರು : 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟಲಾಗಿದ್ದ ಬಸ್ ಸ್ಟ್ಯಾಂಡ್ ಅನ್ನು ಕಳವು ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು. ಬೆಂಗಳೂರಿನಲ್ಲಿ 10 ಲಕ್ಷ ರೂ.ಗಳ ಮೌಲ್ಯದ ಬಸ್ ಶೆಲ್ಟರ್ ಮತ್ತು ಅದರ ಉಕ್ಕಿನ ರಚನೆಯನ್ನು ಕಳವು ಮಾಡಲಾಗಿದೆ. ಅತಿ ಹೆಚ್ಚು ಪ್ರಯಾಣಿಕರಿರುವ ಕಾರಣಕ್ಕೆ ಕನ್ನಿಂಗ್ ಹ್ಯಾಂ ರಸ್ತೆಯ ಬಳಿ 2 ಬಸ್ ಸ್ಟ್ಯಾಂಡ್ಗಳನ್ನು ನಿರ್ಮಿಸಲಾಗಿತ್ತು. ಆದರೆ ಅದರಲ್ಲಿ ಒಂದನ್ನು ಕಳುವು ಮಾಡಲಾಗಿದೆ.ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಈ ಬಸ್ ತಂಗುದಾಣವನ್ನು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ನಿರ್ವಹಿಸುತ್ತಿತ್ತು.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ತಂಗುದಾಣ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕಂಪನಿಯ ಸಹ ಉಪಾಧ್ಯಕ್ಷ ಎನ್.ರವಿ ರೆಡ್ಡಿ ಅವರು ಸೆಪ್ಟೆಂಬರ್ 30 ರಂದು ದೂರು ನೀಡಿದ ನಂತರ ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ಮಾರ್ಚ್ ನಲ್ಲಿ ಎಚ್ಆರ್ಬಿಆರ್ ಲೇಔಟ್ನಲ್ಲಿರುವ ಮೂರು ದಶಕಗಳಷ್ಟು ಹಳೆಯದಾದ ಬಸ್ ನಿಲ್ದಾಣವು ರಾತ್ರೋರಾತ್ರಿ ಕಣ್ಮರೆಯಾಗಿತ್ತು. ಕಲ್ಯಾಣ್ ನಗರದಲ್ಲಿರುವ ಬಸ್ ನಿಲ್ದಾಣವನ್ನು 1990 ರಲ್ಲಿ ಲಯನ್ಸ್ ಕ್ಲಬ್ ದಾನವಾಗಿ ನೀಡಿದೆ ಎಂದು ಪ್ರದೇಶದ ನಿವಾಸಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ತಿಳಿಸಿದೆ. ವಾಣಿಜ್ಯ ಸ್ಥಾಪನೆಗೆ ದಾರಿ ಮಾಡಿಕೊಡಲು ಅದನ್ನು ರಾತ್ರೋರಾತ್ರಿ ತೆಗೆದುಹಾಕಲಾಯಿತು.