ಶಿವಮೊಗ್ಗ : ಶಿವಮೊಗ್ಗದಲ್ಲಿ ಬಿಜೆಪಿಯವರೇ ಗಲಾಟೆ ಮಾಡಿದ್ದಾರೆ’ ಎಂಬ ಹೇಳಿಕೆಗೆ ಸಚಿವ ರಾಮಲಿಂಗಾರೆಡ್ಡಿ ಯೂ ಟರ್ನ್ ಹೊಡೆದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ ನಾನು ಆ ರೀತಿ ಹೇಳಿಕೆ ನೀಡಿಲ್ಲ, ಶಿವಮೊಗ್ಗ ಘಟನೆಯಲ್ಲಿ ಯಾರೇ ತಪ್ಪು ಮಾಡಿದ್ರೂ ಕ್ರಮ ತೆಗೆದುಕೊಳ್ಳಲಿ. ಸಾಮಾನ್ಯವಾಗಿ ಬಿಜೆಪಿಯವರು ಯಾವ ರೀತಿ ಮಾಡ್ತಾರೆ ಅಂತಾ ಹೇಳಿದ್ದೆ. ನಾನು ಶಿವಮೊಗ್ಗ ಘಟನೆ ಆಧರಿಸಿ ಹೇಳಿಕೆ ನೀಡಿಲ್ಲ. ಹಳೇ ಘಟನೆಗಳ ಬಗ್ಗೆ ಬಿಜೆಪಿಯವರು ವೇಷ ಬದಲಿಸಿಕೊಳ್ತಾರೆ ಎಂದಿದ್ದು ಅಷ್ಟೇ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರೇ ವೇಷ ಬದಲಿಸಿಕೊಂಡು ಕಿಡಿಗೇಡಿತನ ಮಾಡುತ್ತಾರೆ ಎಂದು ಶಿವಮೊಗ್ಗ ಗಲಭೆ ಪ್ರಕರಣವನ್ನು ಉಲ್ಲೇಖಿಸಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದರು. ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಾಮಲಿಂಗಾ ರೆಡ್ಡಿ ಉಲ್ಟಾ ಹೊಡೆದಿದ್ದಾರೆ.ಬಿಜೆಪಿಯವರು ಯಾವಾಗಲೂ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ನೈತಿಕ ಪೊಲೀಸ್ ಗಿರಿ ಹಾಗೂ ಗಲಭೆ ಮಾಡಿಸುತ್ತಾರೆ. ಬಿಜೆಪಿ ಕಾರ್ಯಕರ್ತರೇ ವೇಷ ಬದಲಿಸಿಕೊಂಡು ಗಲಭೆ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಬಿಜೆಪಿಯವರ ಅಧಿಕಾರದಲ್ಲಿ ಇಲ್ಲ. ಹೀಗಾಗಿ ರಾಜ್ಯದಲ್ಲಿ ಕೋಮಗಲಭೆ, ಕಿತ್ತಾಡ ತಂದಿಡುವ ಕೆಲಸವನ್ನು ಮಾಡುತ್ತಾರೆ. ಇವೆಲ್ಲ ಅವರ ಹುಟ್ಟುಗುಣ ರಕ್ತದಲ್ಲೇ ಅವರಿಗೆ ಬಂದುಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದರು.