ತಮ್ಮ ವಿರುದ್ಧ ಪೊಲೀಸರು ಸುಳ್ಳು ಆರೋಪ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಹಿಂದುತ್ವ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ, ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಎರಡು ದಿನಗಳ ಹಿಂದೆ ಉಪವಾಸ ಸತ್ಯಾಗ್ರಹ ಕುಳಿತಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನನ್ನ ವಿರುದ್ಧದ ಆರೋಪಗಳಿಗೆ ಸಾಕ್ಷಿ ಕೊಡಿ ಎಂದು ಉಪವಾಸ ಸತ್ಯಾಗ್ರಹ ಕುಳಿತಿರುವ ಪುನೀತ್ ಕೆರೆಹಳ್ಳಿ, ಪೊಲೀಸರು ತಮ್ಮನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ವೈದ್ಯರನ್ನೇ ಇಲ್ಲಿಗೆ ಕರೆಯಿಸಿ ತಪಾಸಣೆ ನಡೆಸಿ ಎಂದು ಹೇಳಿದ್ದು, ಬಳಿಕ ಪೊಲೀಸರು ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಪುನೀತ್ ಕೆರೆಹಳ್ಳಿ ಅವರನ್ನು ಮಾಜಿ ಸಚಿವ ಸಿ.ಟಿ. ರವಿ ಭೇಟಿ ಮಾಡಿ ಸಾಂತ್ವಾನ ಹೇಳಿದ್ದು, ಇದರ ಮಧ್ಯೆ ಅವರನ್ನು ತಪಾಸಣೆ ನಡೆಸಿರುವ ವೈದ್ಯರು ಆಹಾರ ಸ್ವೀಕರಿಸುವಂತೆ ಹೇಳಿದ್ದಾರೆ. ಅಲ್ಲದೆ ಕನಿಷ್ಠಪಕ್ಷ 20 ಎಂಎಲ್ dextrose ಆದರೂ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಇದೆಲ್ಲದಕ್ಕೂ ನಿರಾಕರಿಸಿರುವ ಪುನೀತ್ ಕೆರೆಹಳ್ಳಿ, ಸಾಮಾಜಿಕ ಜಾಲತಾಣವಾದ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ‘ಈಗ ತಾನೇ ವೈದ್ಯರು ಬಂದು
ಪುನೀತ್ ಕೆರೆಹಳ್ಳಿಯವರೆ ನಿಮ್ಮ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗುತ್ತಿದೆ ಈಗ ನಿಮ್ಮ ಶುಗರ್ ಲೆವೆಲ್ಲ್ ಶೇಕಡ 60ಕ್ಕಿಂತ ಕಡಿಮೆ ಹಾಗಿದೆ ಯಾವ ಕ್ಷಣದಲ್ಲಿ ಏನು ಬೇಕಾದರು ಆಗಬಹುದು ಕನಿಷ್ಠ 20ml dextrose ಆದರೂ ತೆಗೆದುಕೊಳ್ಳಿ ಎಂದು ತಿಳಿಸಿದರು ನಾನು ನಿರಾಕರಿಸಿದ್ದೇನೆ ಕನಿಷ್ಠ ನೀರಾದರೂ ಸೇವಿಸಿ ಎಂದರೂ ಅದನ್ನು ನಿರಾಕರಿಸಿದ್ದೇನೆ ಅದಕ್ಕೆ ವಿಕ್ಟೋರಿಯ ಆಸ್ಪತ್ರೆಯವರು ನಾನು ಸತ್ತರೆ ಆಸ್ಪತ್ರೆ/ ಆಡಳಿತ ಜವಾಬ್ದಾರಿ ಅಲ್ಲ ಎಂದು ನನ್ನಿಂದ ಸಹಿ ಮಾಡಿಸಿಕೊಂಡಿದ್ದಾರೆ, ನನ್ನನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು ಸರ್ಕಾರದ ಮನವೊಲಿಸುವ ಬದಲು ನನಗೆ ಚಿಕಿತ್ಸೆ ತೆಗೆದುಕೊಳ್ಳುವಂತೆ ಉಪವಾಸ ಕೈ ಬಿಡುವಂತೆ ನನ್ನ ಮನವೊಲಿಸಲು ಬರುತ್ತಾರೆ, ಈಗ ಚಿಕಿತ್ಸೆಯ ಆಗತ್ಯವಿರುವುದು ಕೇವಲ ನನ್ನ ದೇಹಕ್ಕೆ ಮಾತ್ರ ಅಲ್ಲ ನಮ್ಮ ಸನಾತನ ಧರ್ಮಕ್ಕೆ
ಒಬ್ಬ ಹಿಂದೂ ಕಾರ್ಯಕರ್ತನ ಜೀವಕ್ಕಿಂತ ಸರ್ಕಾರದ ಪ್ರತಿಷ್ಠೆ ಹೆಚ್ಚಾಯಿತಾ?
ನನ್ನ ಜೀವ ಹೋದರು ಸರಿ ಹಿಂದೂ ಕಾರ್ಯಕರ್ತ ಸಾವಿಗೆ ಹೆದರಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎನ್ನುವುದು ಈ ಹಿಂದೂ ವಿರೋಧಿ ಸರ್ಕಾರಕ್ಕೆ ಅರ್ಥವಾಗಬೇಕಿದೆ