HomeKarnatakaBIGG NEWS : ರಾಜ್ಯದಲ್ಲಿ ಮತ್ತೆ ಡೆಂಘೆ ಜ್ವರ ಅಬ್ಬರ : ಒಂದೇ ತಿಂಗಳಲ್ಲಿ 3,700...

BIGG NEWS : ರಾಜ್ಯದಲ್ಲಿ ಮತ್ತೆ ಡೆಂಘೆ ಜ್ವರ ಅಬ್ಬರ : ಒಂದೇ ತಿಂಗಳಲ್ಲಿ 3,700 ಕೇಸ್ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಡೆಂಘೆ ಜ್ವರದ ಅಬ್ಬರ ಶುರುವಾಗಿದದು, ಕೇವಲ ಒಂದೇ ತಿಂಗಳಲ್ಲಿ 3,797 ಕೇಸ್ ಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸಂಖ್ಯೆ 10 ಸಾವಿರ ಗಡಿ ದಾಟಿದೆ.

ರಾಜ್ಯದಲ್ಲಿ ಹವಾಮಾನ ಬದಲಾವಣೆಯಿಂದ ಡೆಂಘೆ ಪ್ರಕರಣಗಳು ಹೆಚ್ಚಳವಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5,756 ಹಾಗೂ ಇತರೆ ಜಿಲ್ಲೆಗಳಲ್ಲಿ 4,504 ಸೇರಿ ರಾಜ್ಯಾದ್ಯಂತ 10,260 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಡುಪಿಯಲ್ಲಿ 590, ಮೈಸೂರಿನಲ್ಲಿ 486, ಶಿವಮೊಗ್ಗದಲ್ಲಿ 264, ಕಲಬುರಗಿಯಲ್ಲಿ 219, ದಕ್ಷಿಣ ಕನ್ನಡದಲ್ಲಿ 210 ಪ್ರಕರಣಗಳು ದೃಢಪಟ್ಟಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೂ ರಾಜ್ಯದಲ್ಲಿ ಚಿಕೂನ್ ಗುನ್ಯಾ ಪ್ರಕಣಗಳು ಪತ್ತೆಯಾಗಿದ್ದು, 36 ಸಾವಿರಕ್ಕೂ ಅಧಿಕ ಮಂದಿ ಚಿಕೂನ್ ಗುನ್ಯಾ ಶಂಕಿತರನ್ನು ಗುರುತಿಸಲಾಗಿದೆ. ಅವರಲ್ಲಿ 1,023 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಮೈಸೂರು 168 ಹಾಗೂ ವಿಜಯಪುರದಲ್ಲಿ 112 ಅಧಿಕ ಪ್ರಕರಣಗಳು ವರದಿಯಾಗಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular