ಬೆಂಗಳೂರು: ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ನಿಲ್ದಾಣದ ವಿವರ ಘೋಷಣೆ ಕೋರಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿದೆ.
ದೃಷ್ಟಿದೋಷ ಇರುವವರಿಂದ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿದ್ದು, ನವೆಂಬರ್ 9 ರೊಳಗೆ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ನಿಲ್ದಾಣದ ಪ್ರಕಟಣೆ ಹೊರಡಿಸುತ್ತಿದ್ದರು. ಇದರಿಂದ ದೃಷ್ಟಿ ದೋಷ ಹೊಂದಿದವರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಿತ್ತು. ಆದರೆ, ಸಾರಿಗೆ ಇಲಾಖೆಯ ಬಸ್ ಗಳಲ್ಲಿ ಈಗ ಇಂತಹ ಸೌಲಭ್ಯ ಇಲ್ಲ. ನೆರೆ ರಾಜ್ಯಗಳ ಸಾರಿಗೆ ಬಸ್ ಗಳಲ್ಲಿ ಈ ಸೌಲಭ್ಯ ಇದೆ. ಸೌಲಭ್ಯ ಮರು ಜಾರಿ ಕೋರಿ ಶ್ರೇಯಸ್ ಎಂಬುವರು ಪಿಐಎಲ್ ಸಲ್ಲಿಸಿದ್ದಾರೆ.
ಸರ್ಕಾರ ಜನರಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳಬೇಕು. ಇತರೆ ರಾಜ್ಯಗಳಿಗೆ ಮಾದರಿಯಾಗುವಂತಹ ಯೋಜನೆ ರೂಪಿಸಬೇಕು. ನವೆಂಬರ್ 9ರೊಳಗೆ ಸಕಾರಾತ್ಮಕ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಹೈಕೋರ್ಟ್ ಸಿಜೆ ಪ್ರಸನ್ನ ಬಿ. ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ಕುರಿತಾಗಿ ಸೂಚನೆ ನೀಡಿದೆ.