ಸಾಂಸ್ಥಿಕ ವರ್ಣಬೇಧ ನೀತಿಯ ಆಘಾತಕಾರಿ ಘಟನೆಯೊಂದರಲ್ಲಿ ಕೆಲವು ಯುಕೆ ನರ್ಸ್‌ಗಳು ಸಿಖ್ ರೋಗಿಯ ಗಡ್ಡವನ್ನು ಪ್ಲಾಸ್ಟಿಕ್ ಕೈಗವಸುಗಳಿಂದ ಕಟ್ಟಿ ಅವರನ್ನು ಮೂತ್ರಾಲಯದಲ್ಲಿ ಬಿಟ್ಟರು ಮತ್ತು ಸಿಖ್ ಧಾರ್ಮಿಕ ಆಹಾರ ಪದ್ಧತಿಯಲ್ಲಿ ಅನುಮತಿಸದ ಆಹಾರವನ್ನು ನೀಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಸಿಖ್ ವ್ಯಕ್ತಿ ತನ್ನ ಮರಣಶಯ್ಯೆಯಲ್ಲಿ ತಾನು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ದೂರು ನೀಡಿದ್ದಾರೆ. ಆದರೆ ದಾದಿಯರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ದೂರುಗಳ ಹೊರತಾಗಿಯೂ ಅವರಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ ಎಂದು ʼಇಂಡಿಪೆಂಡೆಂಟ್ʼ ಪತ್ರಿಕೆಯು ವರದಿ ಮಾಡಿದೆ.
ಶುಶ್ರೂಷಾ ಸಿಬ್ಬಂದಿ ಮತ್ತು ರೋಗಿಗಳ ವಿರುದ್ಧ ಆಪಾದಿತ ವರ್ಣಭೇದ ನೀತಿಯ ಅನೇಕ ಪ್ರಕರಣಗಳನ್ನು ವಿವರಿಸುವ UK ನ ಶುಶ್ರೂಷಾ ನಿಯಂತ್ರಕವಾದ ನರ್ಸಿಂಗ್ ಮತ್ತು ಮಿಡ್‌ವೈಫರಿ ಕೌನ್ಸಿಲ್ (NMC) ನಿಂದ ಸೋರಿಕೆಯಾದ ವರದಿಯಾಗಿದೆ.
“ಸಾಂಸ್ಥಿಕ ವರ್ಣಭೇದ ನೀತಿ” ಯ ಇಂತಹ ನಿದರ್ಶನಗಳು ಇಲಾಖೆಯಲ್ಲಿ ಈಗ 15 ವರ್ಷಗಳಿಂದ ಆಚರಣೆಯಲ್ಲಿವೆ ಮತ್ತು ನಿಯಂತ್ರಕರು ಈ ಕಳವಳಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು NMCಯ ಹಿರಿಯ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಏತನ್ಮಧ್ಯೆ ನರ್ಸಿಂಗ್ ಮತ್ತು ಮಿಡ್‌ವೈಫರಿ ಕೌನ್ಸಿಲ್ (ಎನ್‌ಎಂಸಿ) ಪತ್ರಿಕೆಯ ವರದಿಯನ್ನು ಗಮನಿಸಿದ್ದೇವೆ ಮತ್ತು ಶೀಘ್ರದಲ್ಲೇ ಆರೋಪಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ.