HomeKarnatakaಆಕಳು ಮೈ ತೊಳೆಯಲು ಹೋಗಿ ದುರಂತ; ಕೆರೆಗೆ ಬಿದ್ದು ನೀರು ಪಾಲಾದ ಯುವಕ

ಆಕಳು ಮೈ ತೊಳೆಯಲು ಹೋಗಿ ದುರಂತ; ಕೆರೆಗೆ ಬಿದ್ದು ನೀರು ಪಾಲಾದ ಯುವಕ

ಹಾವೇರಿ: ಆಕಳು ಮೈ ತೊಳೆಯಲು ಕೆರೆಗೆ ಹೋಗಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು ನೀರು ಪಾಲಾದ ಘಟನೆ ಹಾವೇರಿ ಜಿಲ್ಲೆ ಬಾಳಂಬಿಡ ಗ್ರಾಮದಲ್ಲಿ ನಡೆದಿದೆ.

25 ವರ್ಷದ ಬಸವರಾಜ್ ಭರ್ಮಪ್ಪ ಮೂಲಿ ಮೃತ ಯುವಕ. ಮನೋಹರ ನಗರದ ಕಲಕಟ್ಟಿ ಕೆರೆಗೆ ಆಕಳು ಮೈ ತೊಳೆಯಲು ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲ ದಿನಗಳ ಹಿಂದಷ್ಟೇ ಪಿಎಸ್ಐ ಪರೀಕ್ಷೆ ಬರೆದು ಬಂದಿದ್ದ ಯುವಕ ಆಯ್ಕೆಗಾಗಿ ಕಾಯುತ್ತಿದ್ದ. ಅಷ್ಟರಲ್ಲಿ ಈ ದುರಂತ ಸಂಭವಿಸಿದೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular