ಶಿವಮೊಗ್ಗ : ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್(ಕರ್ನಾಟಕ ಉದ್ಯಮಶೀಲತಾಭಿವೃದ್ದಿ, ಧಾರವಾಡ) ಸಂಸ್ಥೆಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಚಿಸುವ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ ಅ.11 ರಿಂದ 20 ರವರೆಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ ಇಲ್ಲಿ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
18 ರಿಂದ 55 ವರ್ಷದೊಳಗಿನ 10 ನೇ ತರಗತಿ ಪಾಸಾದ ಮಹಿಳಾ ಉದ್ಯಮಾಕಾಂಕ್ಷಿಗಳು ಜಂಟಿ ನಿರ್ದೇಶಕರ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್ಸ್, ನೆಹರು ರಸ್ತೆ, ಶಿವಮೊಗ್ಗ ಹಾಗೂ ಸಿಡಾಕ್ ತರಬೇತು ದಾರ ಅವಿನಾಶ ಎ, ಮೊ.ಸಂ: 9164811887 ನ್ನು ಸಂಪರ್ಕಿಸಬಹುದು. ಅರ್ಜಿಯೊಂದಿಗೆ 2 ಪಾಸ್ಪೋರ್ಟ್ ಅಳತೆಯ ಫೋಟೊ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು. ತರಬೇತಿ ವಸತಿರಹಿತವಾಗಿದ್ದು ಊಟೋಪಚಾರ ಒದಗಿಸಲಾಗುವುದು ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You Might Also Like
TAGGED:good news