ಫ್ಯಾಷನ್ ಶೋ ವೇಳೆ ಮಾಡೆಲ್ ಅಚಾತುರ್ಯ; ವೈರಲ್ ವಿಡಿಯೋದಲ್ಲೇನಿದೆ ಗೊತ್ತಾ ?

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಾದ ಅಚಾತುರ್ಯ ಘಟನೆಯೊಂದು ಭಾರೀ ಗಮನ ಸೆಳೆದಿದೆ. ರೂಪದರ್ಶಿಯೊಬ್ಬರು ಬೃಹದಾಕಾರದ ತುಪ್ಪಳದ ಚೆಂಡಿನ ಮಾದರಿ ಧರಿಸಿ ವೇದಿಕೆಯಲ್ಲಿ ಹೆಜ್ಜೆ ಹಾಕ್ತಿರುತ್ತಾರೆ. ಆದರೆ ಒಂದು ಹಂತದಲ್ಲಿ ರೂಪದರ್ಶಿ ಸರಿಯಾಗಿ ದಾರಿ ಕಾಣದೇ ದಿಕ್ಕುತಪ್ಪುತ್ತಾರೆ.

ಈ ವೇಳೆ ವೇದಿಕೆಯಲ್ಲಿ ಗಾಯಕ ಸ್ಯಾಮ್ ಸ್ಮಿತ್‌ ಲೈವ್ ಪ್ರದರ್ಶನ ನೀಡುತ್ತಿರುತ್ತಾರೆ. ಅವರತ್ತ ಹೋದ  ರೂಪದರ್ಶಿಗೆ ರ್ಯಾಂಪ್ ಕಡೆ ತೆರಳುವಂತೆ ಗಾಯಕ ಆಕೆಯನ್ನ ಪಕ್ಕಕ್ಕೆ ಹೋಗುವಂತೆ ಸೂಚಿಸುತ್ತಾರೆ. ಆದರೆ ಮಾಡೆಲ್ ಸರಿಯಾದ ಮಾರ್ಗದಲ್ಲಿ ಹೋಗಲಾಗದೇ ಮುಂದಿನ ಸಾಲಿನಲ್ಲಿ ಕೂತಿದ್ದ ಪ್ರೇಕ್ಷಕರತ್ತ ತೆರಳಿ ಡಿಕ್ಕಿ ಹೊಡೆಯುತ್ತಾರೆ.

ಈ ಅವಘಡವು ಕೆಲ ಕಾಲ ಕಾರ್ಯಕ್ರಮವನ್ನು ಅಸ್ತವ್ಯಸ್ತಗೊಳಿಸಿದಂತೆ ಕಾಣುತ್ತದೆ. ಬಳಿಕ ಮಾಡೆಲ್ ಳನ್ನು ಸಿಬ್ಬಂದಿ ರಕ್ಷಿಸಿ ಆಕೆ ಧರಿಸಿದ್ದ ತುಪ್ಪಳದ ಚೆಂಡಿನ ಮಾದರಿಯನ್ನು ತೆಗೆದು ಆಕೆ ನಿರಾಳವಾಗುವಂತೆ ಮಾಡುತ್ತಾರೆ. ಕ್ರಿಶ್ಚಿಯನ್ ಕೋವನ್ ಅವರ ರೆಡಿ ಟು ವೇರ್ ಸ್ಪ್ರಿಂಗ್ ಸಮ್ಮರ್ ಶೋನಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು ಫ್ಯಾಷನ್ ಡಿಸೈನರ್ ಬಗ್ಗೆ ಸಾರ್ವಜನಿಕರು ಟೀಕಿಸಿದ್ದಾರೆ.

ಸೆಪ್ಟೆಂಬರ್ 25 ರಿಂದ ಪ್ರಾರಂಭವಾಗಿ ಅಕ್ಟೋಬರ್ 3 ರವರೆಗೆ ನಡೆಯುತ್ತಿರುವ ಈ ಫ್ಯಾಶನ್ ವೀಕ್‌ಗಾಗಿ ಫ್ಯಾಶನ್ ಜಗತ್ತು ಪ್ಯಾರಿಸ್‌ನಲ್ಲಿ ತನ್ನ ಗಮನವನ್ನು ಹರಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read