ಭಾರತೀಯ ಸೇನೆಯಲ್ಲಿರುವ ಸೈನಿಕರೊಬ್ಬರು ಕಾನ್ಪುರ ಪೊಲೀಸರ ಸಹಾಯದಿಂದ ತಾವು ಇಷ್ಟಪಟ್ಟಿದ್ದ ಹುಡುಗಿಯನ್ನು ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಅಸಾಮಾನ್ಯ ಘಟನೆಯೊಂದರಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಂಡಿರುವ ಸೇನಾ ಯೋಧರೊಬ್ಬರು ಕಾನ್ಪುರ್ ದೇಹತ್ ಪೊಲೀಸರನ್ನು ಸಂಪರ್ಕಿಸಿ ತಾನು ಇಷ್ಟಪಟ್ಟಿದ್ದ ಯುವತಿಯನ್ನು ಮದುವೆಯಾಗಲು ಸಹಾಯ ಕೋರಿದ್ದರು. ಮನವಿಗೆ ಸ್ಪಂದಿಸಿದ ಪೊಲೀಸರು ಇಬ್ಬರೂ ವಯಸ್ಕರಾದ ಕಾರಣ ಪೊಲೀಸ್ ಠಾಣೆ ಬಳಿಯಿದ್ದ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ. ಮದುವೆಗೆ ಹುಡುಗಿ ಮನೆಯವರು ವಿರೋಧಿಸಿದ ಕಾರಣದಿಂದಾಗಿ ಯೋಧ ಪೊಲೀಸರ ನೆರವು ಕೋರಿದ್ದರು.
ನವಜೋಡಿ 3 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಹುಡುಗಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಇಬ್ಬರೂ ಮೇ 15 ರಂದು ಕಾನ್ಪುರ ನಗರದಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಕೋರ್ಟ್ ನಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ಭೋಲಾ ನಗರ ಪ್ರದೇಶದ ನಿವಾಸಿ ಲ್ಯಾನ್ಸ್ ನಾಯಕ್ ಪವನ್ ಪಾಲ್, ಕಾನ್ಪುರ ದೇಹತ್ ಜಿಲ್ಲೆಯ ಪ್ರಿಯಾಂಕಾ ಅವರನ್ನು ಪ್ರೀತಿಸ್ತಿದ್ದರು. ಅವರ ವಿವಾಹಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ ನಂತರ ಲ್ಯಾನ್ಸ್ ನಾಯಕ್ ಪವನ್ ಪಾಲ್ ಮತ್ತು ಯುವತಿ ಪೊಲೀಸರ ಮೊರೆಹೋಗಿದ್ದರು. ಬಳಿಕ ಅವರ ಕುಟುಂಬಗಳನ್ನು ಕರೆಸಿ ಇಬ್ಬರೂ ವಯಸ್ಕರಾಗಿದ್ದು, ತಮ್ಮದೇ ಆದ ಜೀವನವನ್ನು ನಡೆಸಲು ಅವರಿಗೆ ಅವಕಾಶ ನೀಡಬೇಕು ಎಂದು ಕುಟುಂಬಸ್ಥರಿಗೆ ವಿವರಿಸಲಾಯಿತು. ಸಾಕಷ್ಟು ಮನವೊಲಿಕೆಯ ನಂತರ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದು, ಪೊಲೀಸರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾಡಲಾಯಿತು.
https://twitter.com/JNkanpurdehat/status/1708012269903503855?ref_src=twsrc%5Etfw%7Ctwcamp%5Etweetembed%7Ctwterm%5E1708012269903503855%7Ctwgr%5Ea564693733075d27318bb282aa6fd470fc0c632e%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Findianarmyjawantakeshelpofuppolicetomarrywomanofhischoiceafteroppositionfromfamilywatchvideo-newsid-n542937532