ನವದೆಹಲಿ: ಸರ್ಕಾರ ಶುಕ್ರವಾರ ಕಚ್ಚಾ ಪೆಟ್ರೋಲಿಯಂ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು(SAED) ಸೆಪ್ಟೆಂಬರ್ 30 (ಶನಿವಾರ) ರಿಂದ ಜಾರಿಗೆ ಬರುವಂತೆ ಪ್ರತಿ ಟನ್‌ಗೆ 12,100 ರೂ.ಗೆ ಹೆಚ್ಚಿಸಿದೆ.
ಸೆಪ್ಟೆಂಬರ್ 15 ರಂದು(ಶುಕ್ರವಾರ) ಕಳೆದ ಹದಿನೈದು ದಿನಗಳ ಅವಲೋಕನದಲ್ಲಿ ದೇಶೀಯವಾಗಿ ಉತ್ಪಾದಿಸಲಾದ ಕಚ್ಚಾ ತೈಲದ ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಪ್ರತಿ ಟನ್‌ಗೆ 10,000 ರೂ., ಅಲ್ಲದೆ, ಡೀಸೆಲ್ ರಫ್ತಿನ ಮೇಲಿನ SAED ಅಥವಾ ಸುಂಕವನ್ನು ಪ್ರತಿ ಲೀಟರ್‌ಗೆ 5 ರೂ.ಗೆ ಕಡಿತಗೊಳಿಸಲಾಗುವುದು, ಪ್ರಸ್ತುತ ಲೀಟರ್‌ಗೆ 5.50 ರೂ. ಇದೆ.
ಜೆಟ್ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಇಂಧನ(ಎಟಿಎಫ್) ಮೇಲಿನ ಸುಂಕವು ಶನಿವಾರದಂದು ಪ್ರತಿ ಲೀಟರ್ ಗೆ 2.5 ರೂ. ಇಳಿಕೆಯಾಗಲಿದೆ, ಪ್ರಸ್ತುತ ಪ್ರತಿ ಲೀಟರ್‌ಗೆ 3.5 ರೂ. ಇದ್ದು, ಕಡಿಮೆಯಾಗಲಿದೆ. ಪೆಟ್ರೋಲ್ ಮೇಲಿನ SAED ಶೂನ್ಯದಲ್ಲಿ ಮುಂದುವರಿಯುತ್ತದೆ.
ಭಾರತವು ಮೊದಲ ಬಾರಿಗೆ ಜುಲೈ 1, 2022 ರಂದು ವಿಂಡ್‌ಫಾಲ್ ಲಾಭ ತೆರಿಗೆಗಳನ್ನು ವಿಧಿಸಿತು.