ಬೆಂಗಳೂರು : ಕರುನಾಡಲ್ಲಿ ಕಾವೇರಿಗಾಗಿ ಹೋರಾಟ ಜೋರಾಗಿದೆ. ನಾಳಿನ ಕರ್ನಾಟಕ ಬಂದ್ ಗೆ ಹಲವು ಸಂಘಟನೆಗಳು,ಅಸೋಸಿಯೇಷನ್ ಗಳು ಬೆಂಬಲ ನೀಡಿದೆ. ಇದೀಗ ಓಲಾ , ಉಬರ್ ಕೂಡ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದೆ.
ಈ ಬಗ್ಗೆ ಓಲಾ, ಉಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷಾ ಮಾಹಿತಿ ನೀಡಿದ್ದಾರೆ. ನಾಳಿನ ಕರ್ನಾಟಕ ಬಂದ್ ಗೆ ಬೆಂಬಲ ನೀಡುವಂತೆ ಎಲ್ಲಾ ಚಾಲಕರಿಗೆ ಮನವಿ ಮಾಡಿದ್ದೇವೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಓಲಾ, ಊಬರ್ ರಸ್ತೆಗಿಳಿಸದಿರಲು ನಿರ್ಧರಿಸಿದ್ದೇವೆ ಎಂದರು.
ಕಾವೇರಿ ನಮ್ಮ ಜೀವನಾಡಿ. ಮಂಡ್ಯ, ಬೆಂಗಳೂರು ಸೇರಿದಂತೆ ಹಲವು ಕಡೆ ನೀರು ಒದಗಿಸುವ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ ಎಂದು ನಾವು ಸುಮ್ಮನಿರಬೇಕಾ..? ಕಾವೇರಿಗಾಗಿ ನಮ್ಮ ಹೋರಾಟ ನಡೆಯಲಿದೆ, ನಮ್ಮ ದುಡಿಮೆ ಬಿಟ್ಟು ನಾವು ಹೋರಾಟಕ್ಕೆ ಇಳಿದಿದ್ದೇವೆ ಎಂದು ಎಂದು ತನ್ವೀರ್ ಪಾಷಾ ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ನಾಳೆ ಅಖಂಡ ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿವೆ.ಸೆ.29 ರ ಕರ್ನಾಟಕ ಬಂದ್ ಗೆ ಬಹುತೇಕ ಬೆಂಬಲ ಸಿಕ್ಕಿದೆ. ಎಲ್ಲಾ ಸಂಘಟನೆಗಳು ಬೆಂಬಲ ನೀಡಿದೆ. ಸೆ.29 ರಂದು ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ‘ಕರ್ನಾಟಕ ಬಂದ್’ ಗೆ ಕರೆ ನೀಡಲಾಗಿದೆ.