ಪ್ರೀತಮ್ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬಾನ ದಾರಿಯಲ್ಲಿ’ ಸಿನಿಮಾ ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇಂದು ರಾಜ್ಯಾದ್ಯಂತ ತೆರೆಕಂಡಿದೆ.
ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದು, ಸ್ಪೋರ್ಟ್ಸ್ ಕಾಮಿಡಿ ಹಾಗೂ ಲವ್ ಸ್ಟೋರಿ ಇವೆಲ್ಲವೂ ಒಳಗೊಂಡಿದೆ.
ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ರೀಶ್ಮ ನಾಣಯ್ಯ ಮತ್ತು ರುಕ್ಮಿಣಿ ವಸಂತ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶ್ರೀ ವಾರೆ ಟಾಕೀಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅಭಿಲಾಶ್ ಕಲ್ಲತ್ತಿ ಛಾಯಾಗ್ರಾಣವಿದೆ. ಈ ಸಿನಿಮಾ ಇಂದು ರಾಜ್ಯದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರ ಮನಗೆದ್ದಿದೆ.