ಬೆಂಗಳೂರು: ಪಡಿತರದ ಹಣದ ಬದಲು ಪೌಷ್ಟಿಕ ಆಹಾರ ನೀಡಲು ಪರಿಶೀಲನೆ ನಡೆಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ರೈತ ಮುಖಂಡರು ಭೇಟಿಯಾಗಿ ಪಡಿತರ ವ್ಯವಸ್ಥೆಯಲ್ಲಿ ಹೆಚ್ಚುವರಿ ಅಕ್ಕಿಗೆ ಹಣ ನೀಡುವ ಬದಲು ಪೂರಕ ಪೌಷ್ಟಿಕ ಆಹಾರ ನೀಡುವ ಕುರಿತು ಮನವಿ ಮಾಡಿದ್ದಾರೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪಡಿತರದಲ್ಲಿ 5 ಕೆಜಿ ಅಕ್ಕಿ ಜೊತೆಗೆ ರಾಗಿ ಅಥವಾ ಜೋಳ, ಕಡಲೆಕಾಯಿ ಎಣ್ಣೆ ವಿತರಿಸಲು ಸಭೆಯಲ್ಲಿ ರೈತರು ಸಲಹೆ ನೀಡಿದ್ದಾರೆ. ಸಿರಿಧಾನ್ಯ ಪ್ರೋತ್ಸಾಹ ಯೋಜನೆ ಅಡಿ ಬೇಡಿಕೆ ಇಟ್ಟಿದ್ದಾರೆ ಎಂದರು.