HomeKarnatakaBJPಯ 'ಬಿ' ಟೀಂ ಆಗಿದ್ದರೆ 5 ವರ್ಷ ಸಿಎಂ ಆಗ್ತಿದ್ದೆ ಎಂದ ಮಾಜಿ ಸಿಎಂ: HDK...

BJPಯ ‘ಬಿ’ ಟೀಂ ಆಗಿದ್ದರೆ 5 ವರ್ಷ ಸಿಎಂ ಆಗ್ತಿದ್ದೆ ಎಂದ ಮಾಜಿ ಸಿಎಂ: HDK ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ಈಗ ಜೆಡಿಎಸ್ ನವರು ಯಾರ ಜೊತೆ ಹೋಗಿದ್ದಾರೆ. ಜೆಡಿಎಸ್ ಅಂದರೆ ಜಾತ್ಯಾತೀತ ಅಂತಾರೆ. ಈಗ ಆ ಪರಿಸ್ಥಿತಿ ಇದೆಯಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಬಿ ಟೀಂ ಆಗಿದ್ದರೆ 5 ವರ್ಷ ಸಿಎಂ ಆಗಿರುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ನವರು ಈಗ ಯಾರೊಂದಿಗೆ ಹೋಗಿದ್ದಾರೆ. ಮೊದಲು ಜಾತ್ಯಾತೀತ ಪದವನ್ನು ಜೆಡಿಎಸ್ ತೆಗೆದುಹಾಕಬೇಕು. ಜಾತ್ಯಾತೀತ ಅಂದರೆ ಅದರ ಅರ್ಥವೇನು? ಎಂದು ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2018ರಲ್ಲಿ ಬಿಜೆಪಿ ಜೊತೆ ಆಗಲೇ ಮೈತ್ರಿ ಮಾಡಿಕೊಂಡಿದ್ದರೆ 5 ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular