ಸ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಾವೇರಿ ಪ್ರತಿಭಟನೆ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಹೊರತು ಜನರ ಹಿತದೃಷ್ಟಿಗಾಗಲಿ, ನಾಡಿನ ಹಿತದೃಷ್ಟಿಗಾಗಲಿ ಮಾಡುತ್ತಿಲ್ಲ, ಪ್ರತಿಭಟನೆ ಮಾಡಲು ನಮ್ಮದೇನು ತಕರಾರಿಲ್ಲ. ಆದರೆ ರಾಜಕೀಯ ಮಾಡಬಾರದು. ಕಾವೇರಿ ವಿವಾದವನ್ನು ರಾಜಕೀಯಕ್ಕೆ ಹೋಲಿಸುವುದು ರಾಜ್ಯದ ಹಿತದೃಷ್ಟಿಯಲ್ಲಿ ಒಳ್ಳೆಯದಲ್ಲ. ಎಂದರು.
ಪ್ರತಿಭಟನೆಗೆ ನಾವು ಅಡ್ಡಿಪಡಿಸಲು ಹೋಗುವುದಿಲ್ಲ. ರಾಜ್ಯಸರ್ಕಾರ ರಾಜ್ಯದ ಹಿತ್ತಾಸಕ್ತಿ ಕಾಪಾಡಲು ಬದ್ಧವಾಗಿದೆ. ನಮಗೆ ಅಧಿಕಾರ ಮುಖ್ಯ ಅಲ್ಲಾ. ರಾಜ್ಯದ ಜನರ ಹಿತ ಮುಖ್ಯ ಎಂದು ಹೇಳಿದ್ದಾರೆ.

