ನವದೆಹಲಿ: ತೊಗರಿ ಮತ್ತು ಉದ್ದಿನ ಬೇಳೆ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ತೊಗರಿ ಮತ್ತು ಉದ್ದಿನ ಬೇಳೆ ದಾಸ್ತಾನು ಮೇಲೆ ಹೇರಲಾಗಿದ್ದ ಮಿತಿಯನ್ನು ಡಿಸೆಂಬರ್ 31ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
ಈ ಹಿಂದಿನ ಆದೇಶದಲ್ಲಿ ಅಕ್ಟೋಬರ್ 31ರವರೆಗೆ ದಾಸ್ತಾನಿಗೆ ಮಿತಿ ಹೇರಲಾಗಿತ್ತು. ಸಗಟು ವ್ಯಾಪಾರಿಗಳು ಮತ್ತು ಬೃಹತ್ ಪ್ರಮಾಣದ ರಿಟೇಲ್ ವರ್ತಕರಿಗೆ ದಾಸ್ತಾನು ಮಿತಿಯನ್ನು 200 ಟನ್ ಗಳಿಂದ 50 ಟನ್ ಗಳಿಗೆ ಇಳಿಕೆ ಮಾಡಲಾಗಿದೆ. ರಿಟೇಲ್ ವ್ಯಾಪಾರಿಗಳಿಗೆ 5 ಟನ್, ಮಿಲ್ ಗಳಿಗೆ ಹಿಂದಿನ ಒಂದು ತಿಂಗಳ ಉತ್ಪಾದನೆ ಇಲ್ಲವೇ ವಾರ್ಷಿಕ ಸಾಮರ್ಥ್ಯದ ಶೇಕಡ 10ರಷ್ಟು ದಾಸ್ತಾನು ಮಿತಿ ನಿಗದಿಪಡಿಸಲಾಗಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಆದೇಶ ತಿಳಿಸಿದೆ.
ಅಲ್ಲದೇ, ಸಚಿವಾಲಯದ ಜಾಲತಾಣ http://fcainfoweb.nic.in ವೆಬ್ಸೈಟ್ ನಲ್ಲಿ ದಾಸ್ತಾನು ಮಿತಿ ದಾಖಲಿಸುವಂತೆ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.