HomeKarnatakaಅ.1 ರಂದು `ಅಂತರರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನ’ : `ಶತಾಯುಷಿ ಮತದಾರ'ರ ಗೌರವಿಸಲು ಚುನಾವಣಾ ಆಯೋಗ...

ಅ.1 ರಂದು `ಅಂತರರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನ’ : `ಶತಾಯುಷಿ ಮತದಾರ’ರ ಗೌರವಿಸಲು ಚುನಾವಣಾ ಆಯೋಗ ಸೂಚನೆ

ಬೆಂಗಳೂರು : ಪ್ರತಿ ವರ್ಷ ಅಕ್ಟೋಬರ್ 1 ರಂದು ವಯಸ್ಸಾದವರು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಎತ್ತಿ ತೋರಿಸಲು ಮೀಸಲಿಡಲಾಗಿದೆ. ವಯಸ್ಸಾದ ಜನಸಂಖ್ಯೆಯಲ್ಲಿ ಜಾಗೃತಿ ಮೂಡಿಸಲು ಅಂತರಾಷ್ಟ್ರೀಯ ಹಿರಿಯರ ದಿನವನ್ನು ಸಹ ಆಚರಿಸಲಾಗುತ್ತದೆ.

ಅಕ್ಟೋಬರ್ 1 ರಂದು ಅಂತರರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಭಾರತ ಚುನಾವಣಾ ಆಯೋಗವು ಈ ಬಗ್ಗೆ ವಿಶೇಷವಾಗಿ ಆಚರಿಸಲು ನಿರ್ಧರಿಸಿದೆ. ಈ ಸಂಬಂಧ 100+ ವರ್ಷ ಪೂರೈಸಿದ ಶತಾಯುಷಿ ಮತದಾರರ ಬಗ್ಗೆ ಪರಿಶೀಲಿಸಿ, ಅವರ ಹಿನ್ನೆಲೆ ಗುರುತಿಸಿ, ಸಂಬಂಧಪಟ್ಟ ಅಧಿಕಾರಿಗಳು ಗೌರವಯುತವಾಗಿ ಅಭಿನಂದಿಸುವ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ SVEEP ನೋಡಲ್ ಅಧಿಕಾರಿಗಳು ಆಕ್ಟೋಬರ್ 1 ರಂದು ಅಂತರರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಆಚರಣೆ ಮಾಡಿ, ಶತಾಯುಷಿ ಮತದಾರರಿಗೆ ಸಂಬಂಧಪಟ್ಟ ಅಧಿಕಾರಿಗಳು ಗೌರವಯುತವಾಗಿ ಆಭಿನಂದಿಸುವುದು ಹಾಗೂ ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ತಮ್ಮ-ತಮ್ಮ ಅಧಿಕೃತ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಮತ್ತು ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರ (High Resolution Photo) ಗಳ ಶೀರ್ಷಿಕೆ ಮತ್ತು ಅಡಿಬರಹದೊಂದಿಗೆ, Video clip ಕೂಡ ಚಿತ್ರೀಕರಿಸಿ ವಿವರವಾದ ಮಾಹಿತಿಯನ್ನು [email protected] ಗೆ ಕಳುಹಿಸುವಂತೆ ಕೋರಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular