ನ್ಯೂಜೆರ್ಸಿಯಲ್ಲಿದೆ ಜಗತ್ತಿನ 2ನೇ ಅತೀ ದೊಡ್ಡ ದೇವಾಲಯ; ಹೀಗಿದೆ ಅದರ ವಿಶೇಷತೆ

ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್​ವಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ಹಿಂದೂ ದೇವಾಲಯವಾಗಿದೆ. 2023ರ ಅಕ್ಟೋಬರ್​ 8ರಂದು ಈ ದೇವಾಲಯ ಲೋಕಾರ್ಪಣೆಗೊಳ್ಳಲಿದೆ.

2011ರಿಂದ 2023 ರ 12 ವರ್ಷದ ಅವಧಿಯಲ್ಲಿ ಒಟ್ಟು 12500 ಮಂದಿ ಕೆಲಸಗಾರರು 185 ಎಕರೆಯಷ್ಟು ವಿಶಾಲ ಜಾಗದಲ್ಲಿ ನಿರ್ಮಿಸಲಾದ ಈ ದೇವಸ್ಥಾನದ ಕಲ್ಲು ಕೆತ್ತನೆ ಕಾರ್ಯವನ್ನು ಮಾಡಿದ್ದಾರೆ.

ಈ ದೇವಸ್ಥಾನದ ಹೆಚ್ಚು ಭಾಗಗಳಲ್ಲಿ ಈ ನಾಲ್ಕು ಶಿಲೆಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ ಅವುಗಳೆಂದರೆ ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಅಮೃತಶಿಲೆ, ಗ್ರಾನೈಟ್. ರಾಜಸ್ಥಾನದ ಶಿಲ್ಪಿಗಳು ಕೈ ಕೆತ್ತನೆ ಮೂಲಕ ಈ ದೇವಸ್ಥಾನದ ವಾಸ್ತು ಶಿಲ್ಪವನ್ನು ಮಾಡಿದ್ದಾರೆ.

ಈ ದೇಗುಲವು 135 ಅಡಿ ಅಗಲದ ಮಂಟಪವನ್ನು ಹೊಂದಿದೆ. ಹಾಗೂ ಈ ಮಂಟಪಗಳು 55 ಅಡಿ ಎತ್ತರವಾಗಿವೆ. ಈ ದೇಗುಲದ ಮುಖ್ಯದ್ವಾರವನ್ನ ಮಯೂರ ದ್ವಾರ ಎಂದು ಹೆಸರಿಸಲಾಗಿದೆ. ಈ ದ್ವಾರದ ಮೇಲೆ ನವಿಲು, ಆನೆಗಳು ಸೇರಿದಂತೆ ಅನೇಕ ಕಲಾಕೃತಿಗಳನ್ನ ಕೆತ್ತಲಾಗಿದೆ.

2011ರಿಂದ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗುತ್ತಿತ್ತು. ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ದೇವಸ್ಥಾನಗಳ ವಾಸ್ತುಶಿಲ್ಪಗಳಿಂದ ಸ್ಫೂರ್ತಿ ಪಡೆದು ಈ ದೇಗುಲವನ್ನು ನಿರ್ಮಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read