BIG NEWS: ಬಿಜೆಪಿ ಶಾಸಕನ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಯುವಕ

ಲಖನೌ: ಬಿಜೆಪಿ ಶಾಸಕರ ಮಾಧ್ಯಮ ಸಲಹೆಗಾರನೊಬ್ಬ ಶಾಸಕರ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಹಜರತ್ ಗಂಜ್ ನಲ್ಲಿ ನಡೆದಿದೆ.

ಶ್ರೇಷ್ಠ ತಿವಾರಿ (24) ಆತ್ಮಹತ್ಯೆಗೆ ಶರಣಾದ ಯುವಕ. ಉತ್ತರ ಪ್ರದೇಶದ ಲಖನೌದ ಬಕ್ಷಿ ಕಾ ತಲಾಬ್ ನ ಬಿಜೆಪಿ ಶಾಸಕ ಯೋಗೇಶ್ ಶುಕ್ಲಾ ಅವರ ಮಾಧ್ಯಮ ಸಲಹೆಗಾರನಾಗಿ ಶ್ರೇಷ್ಠ ತಿವಾರಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರೀತಿಸಿದ ಯುವತಿಯೊಂದಿಗೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಶ್ರೇಷ್ಠ ತಿವಾರಿ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗಿದೆ. ಬೆಳಿಗ್ಗೆ ವಿಡಿಯೋ ಕಾಲ್ ಮಾಡಿ ಯುವತಿಯೊಂದಿಗೆ ಮಾತನಾಡಿದ್ದ ಶ್ರೇಷ್ಠ ತಿವಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದು, ತಕ್ಷಣ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಯುವತಿ ಪೊಲೀಸರೊಂದಿಗೆ ಹಜರತ್ ಗಂಜ್ ನಲ್ಲಿರುವ ಶಾಸಕರ ಫ್ಲಾಟ್ ಗೆ ಆಗಮಿಸುವಷ್ಟರಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಬಂದಾಗ ಮನೆಯ ಬಾಗಿಲು ಮುಚ್ಚಿತ್ತು. ಬಾಗಿಲು ಒಡೆದು ಮನೆಯೊಳಗೆ ಹೋದ ಪೊಲೀಸರಿಗೆ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

ಶ್ರೇಷ್ಠ ತಿವಾರಿ ಶಾಸಕರ ನಿವಾಸದಲ್ಲಿ ಕಳೆದ ರಾತ್ರಿ ಒಬ್ಬರೆ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಯುವಕನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಯುವತಿಯ ಮೊಬೈಲ್ ನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read