ಬೆಂಗಳೂರು : ನನ್ನ ಭಾವನೆಯನ್ನು ನಾನು ಹೇಳಿದ್ದೇನೆ, ಹೈಕಮಾಂಡ್ ಯಾವುದೇ ನಿರ್ಧಾರ ಬೇಕಾದರೂ ಕೈಗೊಳ್ಳಲಿ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ಮೂರು ಡಿಸಿಎಂ ಹುದ್ದೆಗೆ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನನ್ನ ಭಾವನೆಯನ್ನು ಹೇಳಿದಿನಿ, ಅದು ಮುಗಿದ ಹೋದ ಅಧ್ಯಾಯ. ಹೈಕಮಾಂಡ್ ಏನು ಬೇಕಾದರೂ ತೀರ್ಮಾನ ಕೈಗೊಳ್ಳಲಿ, ಹೈಕಮಾಂಡ್ಗೆ ದೂರು ಕೊಟ್ಟಿರುವುದು ನನಗೆ ಗೊತ್ತಿಲ್ಲ. ಪದೇ ಪದೇ ಈ ವಿಚಾರವನ್ನ ನಾನು ಮಾತಾಡಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಸಚಿವ ರಾಜಣ್ಣ ಬಳಿಕ ಮಾಜಿ ಸಚಿವ ‘ಬಸವರಾಜ ರಾಯರೆಡ್ಡಿ’ ಕೂಡ ಡಿಸಿಎಂ ಹುದ್ದೆ ಸೃಷ್ಟಿಸಲು ಬೇಡಿಕೆಯಿಟ್ಟಿದ್ದಾರೆ, ಅವರು ಮೂರಲ್ಲ ಆರು ಡಿಸಿಎಂ ಹುದ್ದೆ ಸೃಷ್ಠಿಸಲು ಒತ್ತಾಯಿಸಿದ್ದಾರೆ.ಎಲ್ಲ ಜಾತಿ ಧರ್ಮಗಳು ಕಾಂಗ್ರೆಸ್ ಗೆ ಬೆಂಬಲ ನೀಡಿವೆ. ಮುಸ್ಲಿಂ, ಎಸ್ಸಿ, ಎಸ್ಟಿ ಸೇರಿದಂತೆ ಮಹಿಳೆಗೂ ಒಂದು ಡಿಸಿಎಂ ಹುದ್ದೆ ನೀಡಬೇಕು.. ಈ ಬಗ್ಗೆ ಸಿಎಂ, ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಬೇಕು, ನಾನು ರಾಜಣ್ಣ, ಪರಮೇಶ್ವರ್ ಹೇಳಿಕೆ ಬೆಂಬಲಿಸುತ್ತೇನೆ ಎಂದಿದ್ದರು.