alex Certify ‘ಕ್ರಿಕೆಟ್’​ ಜಗತ್ತಿನಲ್ಲಿ ಯಾರಿಂದಲೂ ಮುರಿಯಲಾಗದ ಈ ದಾಖಲೆ ನಿರ್ಮಿಸಿದ್ದಾರೆ ಎಂ.ಎಸ್​. ಧೋನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕ್ರಿಕೆಟ್’​ ಜಗತ್ತಿನಲ್ಲಿ ಯಾರಿಂದಲೂ ಮುರಿಯಲಾಗದ ಈ ದಾಖಲೆ ನಿರ್ಮಿಸಿದ್ದಾರೆ ಎಂ.ಎಸ್​. ಧೋನಿ

ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮಾಡಿದ ಸಾಧನೆಗಳನ್ನು ವಿಶೇಷವಾಗಿ ಹೇಳಬೇಕಿಲ್ಲ. ಟೀಂ ಇಂಡಿಯಾ ನಾಯಕನಿಂದ ಹಿಡಿದು ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮುಂದಾಳತ್ವದವರೆಗೂ ಧೋನಿ ಕ್ರಿಕೆಟ್​ ದುನಿಯಾದಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ.

ಓರ್ವ ಕ್ರಿಕೆಟಿಗ ಮಾಡಿದ ದಾಖಲೆಯನ್ನು ಮತ್ತೊಬ್ಬ ಕ್ರಿಕೆಟಿಗ ಮುರಿಯೋದು ಸರ್ವೇ ಸಾಮಾನ್ಯ. ಆದರೆ ಧೋನಿಯ ಕೆಲವೊಂದು ದಾಖಲೆಗಳನ್ನು ಮುರಿಯಲು ಸಾಧ್ಯವೇ ಇಲ್ಲ.

ಎಂಎಸ್​ ಧೋನಿ ಹೆಸರಲ್ಲಿ ಕ್ರಿಕೆಟ್​ ಜಗತ್ತಿನಲ್ಲಿ ಅನೇಕ ದಾಖಲೆಗಳಿವೆ. ಕೆಲವೊಂದು ದಾಖಲೆಗಳನ್ನಂತೂ ಮುರಿಯೋದು ಕಬ್ಬಿಣದ ಕಡಲೆ ಎಂದು ಹೇಳಿದ್ರೂ ತಪ್ಪಾಗೋದಿಲ್ಲ. ಹಾಗಾದ್ರೆ ಎಂಎಸ್​ ಧೋನಿ ಆ ಐದು ವಿಶೇಷ ದಾಖಲೆಗಳು ಯಾವುದು ಅಂತಾ ನೋಡೋಣ ಬನ್ನಿ.

ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದು :

ಇಲ್ಲಿಯವರೆಗೆ ಟೀಂ ಇಂಡಿಯಾ ಇತಿಹಾಸದಲ್ಲಿ ಯಾವ ನಾಯಕನೂ ಸಹ ತಂಡಕ್ಕೆ ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿಲ್ಲ. ಆದರೆ ಧೋನಿ 2007ರಲ್ಲಿ ಟಿ 20 ವರ್ಲ್ಡ್​ ಕಪ್​, 2011ರಲ್ಲಿ ಏಕದಿನ ವಿಶ್ವಕಪ್​ ಹಾಗೂ 2013ರಲ್ಲಿ ಚಾಂಪಿಯನ್ಸ್​ ಟ್ರೋಫಿ ಟೀಂ ಇಂಡಿಯಾದ ಮುಡಿಗೇರುವಂತೆ ಮಾಡಿದ್ದಾರೆ.

ಅತೀ ವೇಗದ ಸ್ಟಂಪಿಂಗ್​ :

ಧೋನಿ ಟೀಂ ಇಂಡಿಯಾದ ನಾಯಕನ ಜೊತೆಯಲ್ಲಿ ವಿಕೆಟ್​ ಕೀಪರ್​ ಕೂಡ ಹೌದು ಅನ್ನೋದು ಎಲ್ರಿಗೂ ತಿಳಿದಿರೋ ವಿಚಾರ. ಧೋನಿ ಕೇವಲ 0.08 ಸೆಕೆಂಡುಗಳಲ್ಲಿ ವೆಸ್ಟ್​ ಇಂಡೀಸ್​ ತಂಡದ ಬ್ಯಾಟ್ಸ್​ಮನ್​ ಕೀಮೋ ಪೌಲ್ ವಿಕೆಟ್​ ಉರುಳಿಸೋ ಮೂಲಕ 2018ರಲ್ಲಿ 0.09 ಸೆಕೆಂಡುಗಳಲ್ಲಿ ಮಾಡಿದ್ದ ತಮ್ಮದೇ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸ್ಟಂಪಿಂಗ್​ :

ಧೋನಿ ಆಡಿರುವ 538 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರು 195 ಸ್ಟಂಪಿಂಗ್​ಗಳನ್ನ ಮಾಡಿದ್ದಾರೆ. ಐಪಿಎಲ್​ನಲ್ಲಿಯೂ ಅತೀ ಹೆಚ್ಚು ಸ್ಟಂಪಿಂಗ್​ ಮಾಡಿದ ಆಟಗಾರ ಕೂಡ ಧೋನಿಯೇ.

ಬೇರೆ ಬೇರೆ ಬ್ಯಾಟಿಂಗ್​ ಆರ್ಡರ್​ನಲ್ಲಿ ಬಂದು ಅತೀ ಹೆಚ್ಚು ಅರ್ಧಶತಕ ಗಳಿಸಿದ ಖ್ಯಾತಿ :

ಐದು ಬೇರೆ ಬ್ಯಾಟಿಂಗ್​ ಆರ್ಡರ್​ನಲ್ಲಿ ಬಂದಿದ್ದರೂ ಸಹ ಅತೀ ಹೆಚ್ಚು ಅರ್ಧಶತಕ ಗಳಿಸಿದ ಏಕೈಕ ಆಟಗಾರ ಧೋನಿ. ಧೋನಿ 3,4,5,6 ಹಾಗೂ 7ನೇ ಆರ್ಡರ್​​ನಲ್ಲಿ ಬಂದು ಅರ್ಧಶತಕ ಗಳಿಸಿದ್ದಾರೆ.

ICC ODI ಬ್ಯಾಟ್ಸ್‌ಮನ್‌ಗಳಲ್ಲಿ ವೇಗವಾಗಿ ನಂಬರ್ 1 ಸ್ಥಾನಕ್ಕೆ ಏರಿದ ಕೀರ್ತಿ:

ಎಂಎಸ್​ ಧೋನಿ ಕೇವಲ 42 ಇನ್ನಿಂಗ್ಸ್​​ ಪೂರೈಸುವಷ್ಟರಲ್ಲಿಯೇ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್​ರ ದಾಖಲೆಯನ್ನು ಮುರಿದು ಅತೀ ವೇಗವಾಗಿ ಈ ಮೈಲಿಗಲ್ಲನ್ನು ತಲುಪಿದ ನಾಯಕ ಎನಿಸಿ
MS ಧೋನಿ 42 ಇನ್ನಿಂಗ್ಸ್‌ಗಳ ನಂತರ ಐಸಿಸಿ ಪುರುಷರ ODI ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಅವರು ಆಸ್ಟ್ರೇಲಿಯದ ನಾಯಕ ರಿಕಿ ಪಾಂಟಿಂಗ್‌ರನ್ನು ಹಿಂದಿಕ್ಕಿ ಅತಿ ವೇಗವಾಗಿ ಮೈಲಿಗಲ್ಲನ್ನು ತಲುಪಿದ ಕ್ರಿಕೆಟಿಗ ಎನಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...