ಬೆಂಗಳೂರು : ಆರು ಡಿಸಿಎಂ ಹುದ್ದೆ ಸೃಷ್ಠಿಸಲು ಮಾಜಿ ಸಚಿವ ‘ಬಸವರಾಜ ರಾಯರೆಡ್ಡಿ’ ಬೇಡಿಕೆಯಿಟ್ಟಿದ್ದು, ಮತ್ತೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
ಸಚಿವ ರಾಜಣ್ಣ ಬಳಿಕ ಮಾಜಿ ಸಚಿವ ‘ಬಸವರಾಜ ರಾಯರೆಡ್ಡಿ’ ಕೂಡ ಡಿಸಿಎಂ ಹುದ್ದೆ ಸೃಷ್ಟಿಸಲು ಬೇಡಿಕೆಯಿಟ್ಟಿದ್ದಾರೆ, ಅವರು ಮೂರಲ್ಲ ಆರು ಡಿಸಿಎಂ ಹುದ್ದೆ ಸೃಷ್ಠಿಸಲು ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಬಸವರಾಜ ರಾಯರೆಡ್ಡಿ’ ಎಲ್ಲ ಜಾತಿ ಧರ್ಮಗಳು ಕಾಂಗ್ರೆಸ್ ಗೆ ಬೆಂಬಲ ನೀಡಿವೆ. ಮುಸ್ಲಿಂ, ಎಸ್ಸಿ, ಎಸ್ಟಿ ಸೇರಿದಂತೆ ಮಹಿಳೆಗೂ ಒಂದು ಡಿಸಿಎಂ ಹುದ್ದೆ ನೀಡಬೇಕು.. ಈ ಬಗ್ಗೆ ಸಿಎಂ, ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಬೇಕು, ನಾನು ರಾಜಣ್ಣ, ಪರಮೇಶ್ವರ್ ಹೇಳಿಕೆ ಬೆಂಬಲಿಸುತ್ತೇನೆ ಹೇಳಿದರು.
ಇತ್ತೀಚೆಗೆ ಕೆಎನ್ ರಾಜಣ್ಣ ಹೇಳಿಕೆಗೆ ಶುಕ್ರವಾರ ಗರಂ ಆದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಟ್ರ್ಯಾಕ್ ರೆಕಾರ್ಡ್ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ನನಗೆ ಸ್ಥಾನ ನೀಡಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಇಂತಹ ಆಸೆಗಳ ಅಭಿವ್ಯಕ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ಸ್ಪಂದಿಸಬೇಕಿದೆ ಎಂದರು.