ಬೆಂಗಳೂರು : ‘ಗೃಹಲಕ್ಷ್ಮಿ’ ಯೋಜನೆಯಡಿ ಮನೆ ಯಜಮಾನಿಗೆ 2000 ರೂ ನೀಡುವ ಸಲುವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಅವಧಿಗಾಗಿ ಸರ್ಕಾರ ಮೊದಲ ಕಂತಿನ ಹಣ ಬಿಡುಗಡೆ ಮಾಡಿದೆ.ಆದರೆ ಇನ್ನೂ ಕೆಲವರಿಗೆ ಆಗಸ್ಟ್ ತಿಂಗಳ ಹಣ ಕೂಡ ಬಂದಿಲ್ಲ. ಹಾಗಾದರೆ ಇದಕ್ಕೆ ಏನು ಕಾರಣ..ನೀವೇನು ಮಾಡಬೇಕು ತಿಳಿಯಿರಿ.
ನೀವು ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಖಾತೆಗೆ ಇನ್ನೂ ಹಣ ವರ್ಗಾವಣೆ ಆಗಿಲ್ಲ ಎಂದರೆ ಈ ರೀತಿ ಸಮಸ್ಯೆಗಳು ಆಗಿರಬಹುದು.
ರೇಷನ್ ಕಾರ್ಡ್ ಸಕ್ರಿಯವಾಗಿದ್ದಾಗ ಮಾತ್ರ ನಿಮಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಿಗಲು ಸಾಧ್ಯ. ಆದ್ದರಿಂದ ನೀವು ಈಗಲೇ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ..ಅದು ಹೇಗೆ ಮಾಡುವುದು ಎಂಬುದನ್ನು ಮುಂದೆ ಓದಿ.
1) ಮೊದಲಿಗೆ ಮಾಹಿತಿ ಕಣಜ ವೆಬ್ಸೈಟ್ಗೆ www.mahitikanaja.karntaka.gov.in ಗೆ ಕ್ಲಿಕ್ ಮಾಡುವ ಮೂಲಕ ಭೇಟಿ ಕೊಡಬಹುದು
2) ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆ ಕೇಳಲಾಗುತ್ತದೆ ಅದನ್ನು ಎಂಟ್ರಿ ಮಾಡಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿ, ನಂತರ ನಿಮ್ಮ ರೇಷನ್ ಕಾರ್ಡ್ ಕುರಿತ ಸಂಪೂರ್ಣ ಮಾಹಿತಿ ಬರುತ್ತದೆ.
3)ಇದಾದ ಬಳಿಕ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ, ನ್ಯಾಯಬೆಲೆ ಅಂಗಡಿ ಮತ್ತು ರೇಷನ್ ಕಾರ್ಡ್ ಸ್ಥಿತಿ ಕೂಡ ಪೇಜ್ ಮೇಲೆ ಕಾಣಿಸುತ್ತದೆ. ಹಾಗೆ ನಿಮ್ಮ ಕುಟುಂಬದಲ್ಲಿರುವ ಎಲ್ಲಾ ಸದಸ್ಯ ಸಂಖ್ಯೆ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಹೆಸರು ಎಲ್ಲಾ ವಿವರ ಕೂಡ ಬರುತ್ತದೆ, ಇದರಲ್ಲಿ ರೇಷನ್ ಕಾರ್ಡ್ ಸ್ಥಿತಿ ಸಕ್ರಿಯ ಉಂಟಾ ಇಲ್ವಾ ಎಂದು ಧೃಡಪಡಿಸಿಕೊಳ್ಳಿ.
4)ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರದಲ್ಲಿ ಮಾಹಿತಿಗಳು ಹೊಂದಾಣಿಕೆ ಆಗಿರಬೇಕು, ಅಥವಾ ಹೆಸರುಗಳಲ್ಲಿ ಏನಾದರೂ ತಪ್ಪಾಗಿದ್ದರೆ ಬೇಗನೇ ಸರಿಪಡಿಸಿಕೊಳ್ಳಿ.ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಆಧಾರ್ ಲಿಂಕ್ ಮಾತ್ರವಲ್ಲ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಕೂಡ ಆಗಿರಬೇಕು.
5) ಗೊಂದಲದಲ್ಲಿರುವ ಮಹಿಳೆಯರು 8147500500 ಈ ಸಂಖ್ಯೆಗೆ ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಕಳುಹಿಸುವ ಮೂಲಕ ತಮ್ಮ ಅರ್ಜಿ ಸಲ್ಲಿಕೆ ಸ್ಥಿತಿ ಏನಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
6) ಬ್ಯಾಂಕ್ ಖಾತೆ ರದ್ದಾಗಿರುವ ಕಾರಣದಿಂದ ಅಂತಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಹಣ ಬಾರದ ಮಹಿಳೆಯರು ಕೂಡಲೇ ತಮ್ಮ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಬ್ಯಾಂಕ್ ಗೆ ತೆರಳಿ ಈ ಬಗ್ಗೆ ಪರಿಶೀಲನೆ ಮಾಡಿಸಿ.