ಹಬ್ಬದ ಋತುವಿನಲ್ಲಿ ಹೊಸ ವಾಹನಗಳನ್ನು ಖರೀದಿಸಲು ಬಹುತೇಕರು ಬಯಸುತ್ತಾರೆ. ಈ ಸಂದರ್ಭದಲ್ಲಿ ಡಿಸ್ಕೌಂಟ್ ಸೇರಿದಂತೆ ಹಲವು ಕೊಡುಗೆಗಳು ಲಭ್ಯವಾಗುವ ಕಾರಣ ಈ ತೀರ್ಮಾನಕ್ಕೆ ಬರುತ್ತಾರೆ.
ಇದೀಗ ಕಿಯಾ ಇಂಡಿಯಾದ ಸೆಲ್ಟೋಸ್ ಮತ್ತು ಕಾರೆನ್ಸ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಹುಮುಖ್ಯ ಮಾಹಿತಿ ಒಂದು ಇಲ್ಲಿದೆ. ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಇವುಗಳ ಬೆಲೆಯನ್ನು ಶೇಕಡ ಎರಡರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಕಂಪನಿಯ ಭಾರತದ ಮುಖ್ಯಸ್ಥ ಹರ್ದಿಪ್ ಎಸ್. ಬರಾರ್ ಈ ಕುರಿತು ಮಾಹಿತಿ ನೀಡಿದ್ದು, ಏಪ್ರಿಲ್ ಬಳಿಕ ಹಲವು ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಏರಿಕೆ ಮಾಡಿದ್ದರೂ ನಾವು ಹೆಚ್ಚಳ ಮಾಡಿರಲಿಲ್ಲ. ಆದರೆ ಇದೀಗ ಹೊಸ ಸೆಲ್ಟೋಸ್ ಬಿಡುಗಡೆ ಮಾಡಲಾಗಿದ್ದು, ಇದಕ್ಕಾಗಿ ಸಾಕಷ್ಟು ಹೂಡಿಕೆ ಮಾಡಲಾಗಿದೆ. ಹೀಗಾಗಿ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.