ಬೆಂಗಳೂರು: ಮೊಬೈಲ್ ಕಳೆದರೆ ತಕ್ಷಣ ಲಾಕ್ ಮಾಡುವ ವ್ಯವಸ್ಥೆ ಜಾರಿಯಾಗಿದ್ದು, ಪೊಲೀಸ್ ಇಲಾಖೆಯಿಂದ ಆ್ಯಪ್ ಬಿಡುಗಡೆ ಮಾಡಲಾಗಿದೆ.
ಮೊಬೈಲ್ ಕಳುವಾದ ಕೂಡಲೇ ಪೊಲೀಸ್ ಇಲಾಖೆಯ ಅಧಿಕೃತ KSP Application ನಲ್ಲಿ ದೂರು ದಾಖಲೆಸಿ ತಕ್ಷಣವೇ ಮೊಬೈಲ್ ಲಾಕ್ ಮಾಡುವ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಕಳೆದು ಹೋದ ಮೊಬೈಲ್ ಅನ್ನು ಲಾಕ್ ಮಾಡಿದಲ್ಲಿ ಬೇರೆಯವರು ಅದನ್ನು ಬಳಸಲು ಸಾಧ್ಯವಾಗುವುದಿಲ್ಲ.
ಗೂಗಲ್ ಪ್ಲೇ ಸ್ಟೋರ್ ನಿಂದ ಕೆ.ಎಸ್.ಪಿ. ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಮೊಬೈಲ್ ಬಿಲ್ ಇದ್ದಲ್ಲಿ ಅದನ್ನು ಅಪ್ಲೋಡ್ ಮಾಡಿ ಸೆಲೆಕ್ಟ್ ಆರ್ಟಿಕಲ್ ಆಪ್ಷನ್ ಆಯ್ಕೆ ಮಾಡಬೇಕು. ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಮೊಬೈಲ್ ಕಳೆದು ಹೋದ ದಿನಾಂಕ, ಸಮಯ, ಸ್ಥಳ ಮಾಹಿತಿಯನ್ನು ಒದಗಿಸಿ ಸ್ವೀಕೃತಿ ಪಡೆಯಬಹುದಾಗಿದೆ.