ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಂಬೈನಲ್ಲಿ ಶಿವಸೇನಾ ನಾಯಕ ರಾಹುಲ್ ಕನಾಲ್ರ ನಿವಾಸಕ್ಕೆ ಭೇಟಿ ನೀಡಿದ್ದು ಗಣೇಶ ಮೂರ್ತಿಯ ದರ್ಶನ ಪಡೆದಿದ್ದಾರೆ. ಕಪ್ಪು ಬಣ್ಣದ ಕುರ್ತಾ ಧರಿಸಿದ್ದ ಕೊಹ್ಲಿ, ಕರ್ನಾಲ್ ನಿವಾಸದಿಂದ ಹೊರಬರುತ್ತಿರೋದು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಂಗಳವಾರ ಮುಂಜಾನೆ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಗಣೇಶ ಚತುರ್ಥಿ ಹಬ್ಬಕ್ಕೆ ಶುಭಕೋರಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ಸೆಲೆಬ್ರಿಟಿ ದಂಪತಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಈ ಫೋಟೋದಲ್ಲಿ ಪರಿಸರ ಸ್ನೇಹಿ ಗಣಪನೊಂದಿಗೆ ಸಾಂಪ್ರದಾಯಿಕ ಸೀರೆಯಲ್ಲಿ ಅನುಷ್ಕಾ ಅತ್ಯಂತ ಸೊಗಸಾಗಿ ಕಂಗೊಳಿಸಿದ್ದಾರೆ. ವಿರುಷ್ಕಾ ದಂಪತಿಯ ಈ ಫೊಟೋ ಸಖತ್ ವೈರಲ್ ಕೂಡ ಆಗಿದೆ.
Virat Kohli at a friend's home to seek the blessing of Ganpati Bappa. [Wrogn_edits] pic.twitter.com/i9pW2e08cL
— Johns. (@CricCrazyJohns) September 20, 2023

