ಸಂಜೀವ್ ಗಾವಂಡಿ ನಿರ್ದೇಶನದ ‘ಅಡವಿಕಟ್ಟೆ’ ಚಿತ್ರದ ಟೀಸರ್ ನಿನ್ನ ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೋಡುಗರ ಗಮನ ಸೆಳೆದಿದೆ.
ಸಿನಿ ಪ್ರೇಕ್ಷಕರಿಂದ ಈ ಟೀಸರ್ ಗೆ ಉತ್ತಮ ಪ್ರತಿಕ್ರಿಯೆಗಳು ಬಂದಿದೆ. ಫ್ಯಾಮಿಲಿ ಸ್ಟಾರ್ ಅಭಿಜಿತ್ ಸೇರಿದಂತೆ ನಾಗರಾಜ್ ಎನ್, ಮಂಜುಳಾ ರೆಡ್ಡಿ, ಶಂಕರ, ಅನು ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಸಿ ಎಚ್ ಮೂವೀಸ್ ಬ್ಯಾನರ್ ನಲ್ಲಿ ಉಮಾ ಎಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎಸ್ ನಾಗು ಮತ್ತು ಈಶ್ವರ್ ಸಂಗೀತ ಸಂಯೋಜನೆ ನೀಡಿದ್ದಾರೆ. ವೀರೇಶ್ ಛಾಯಾಗ್ರಾಹಣವಿದ್ದು, ಆದಿ ಸಂಕಲನವಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.
https://www.youtube.com/watch?v=RFGlEVVv-SY