HomeIndia'ಭಟ್ಕಳದಂತೆ ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಲು ಪಣ ತೊಟ್ಟಿದ್ದ ಉಗ್ರರು' : ‘NIA’ ತನಿಖೆ ವೇಳೆ...

‘ಭಟ್ಕಳದಂತೆ ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಲು ಪಣ ತೊಟ್ಟಿದ್ದ ಉಗ್ರರು’ : ‘NIA’ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲು

ಭಟ್ಕಳ ಮಾದರಿಯಲ್ಲೇ ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಲು ಉಗ್ರರು ಪಣ ತೊಟ್ಟಿದ್ದರು ಎಂಬ ಸ್ಪೋಟಕ ಮಾಹಿತಿ ‘NIA’ ತನಿಖೆ ವೇಳೆ ಬಯಲಾಗಿದೆ.

ಭಟ್ಕಳ ಮಾದರಿಯಲ್ಲೇ ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಲು ಪಣ ತೊಟ್ಟಿರುವ ಶಾಕಿಂಗ್ ಸಂಗತಿಯನ್ನು ಅರಾಫತ್ ಅಲಿ ಬಾಯ್ಬಿಟ್ಟಿದ್ದಾನೆ. ಅರಾಫತ್ ಅಲಿ ಬಂಧನದ ಬಳಿಕ ಹಲವು ಸ್ಪೋಟಕ ಮಾಹಿತಿ ಬಯಲಾಗುತ್ತಿದೆ.

ಯಾಸೀನ್ ಭಟ್ಕಳ್, ರಿಯಾಜ್ ಭಟ್ಕಳ ಹಾಗೂ ಇಕ್ಬಾಲ್ರಿಂದ ಭಟ್ಕಳ ಉಗ್ರವಾದಕ್ಕೆ ಕುಖ್ಯಾತಿ ಪಡೆದಿತ್ತು. ಇದೇರೀತಿ ತೀರ್ಥಹಳ್ಳಿ ಮೂಲದವರಾದ ಮಾಜ್ ಮುನೀರ್, ಶಾರೀಕ್, ಅರಾಫತ್ ಅಲಿ, ಅಬ್ದುಲ್ ಮತೀನ್ ನಾಲ್ವರು ತೀರ್ಥಹಳ್ಳಿಯನ್ನು ಉಗ್ರರ ನೆಲೆಯಾಗಿಸಲು ಸಂಚು ರೂಪಿಸಿದ್ದರು. ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಿ ತೀರ್ಥಹಳ್ಳಿಯನ್ನು ಬ್ರದರ್ಸ್ʼ ಎಂದು ತಾವು ಹೆಸರಾಗಬೇಕು ಎಂದು ಬಯಸಿದ್ದರು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಂಟೆಡ್ ಟೆರರಿಸ್ಟ್ ಆಗಿರುವ ಅಬ್ದುಲ್ ಮತೀನ್ ಹಾಗೂ ಮಾಜ್ ಮುನೀರ್, ಶಾರೀಕ್, ಅರಾಫತ್ ಅಲಿ ನಾಲ್ವರೂ ತೀರ್ಥಹಳ್ಳಿ ಮೂಲದವರೇ ಆಗಿದ್ದಾರೆ. ಸದ್ಯ ಮೂವರ ಬಂಧನ ಆಗಿದ್ದು, ಅಬ್ದುಲ್ ಮತೀನ್ ಬಂಧನಕ್ಕೆ ಬಲೆ ಬೀಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular