ರಾಯ್ ಪುರ: ಇಸ್ರೋದ ಯಶಸ್ವಿ ಚಂದ್ರನ ಲ್ಯಾಂಡಿಂಗ್ ಮಿಷನ್ ‘ಚಂದ್ರಯಾನ-3’ ಅನ್ನು ಗಣೇಶ ಚತುರ್ಥಿಗಾಗಿ ಛತ್ತೀಸ್ ಗಢದ ರಾಯ್ ಪುರದಲ್ಲಿ 120 ಅಡಿ ಪೆಂಡಾಲ್ ನಲ್ಲಿ ಮರುಸೃಷ್ಟಿಸಲಾಗಿದೆ.
ರಾಯ್‌ಪುರದ ಪೆಂಡಾಲ್ ಚಂದ್ರಯಾನ-3 ಬಾಹ್ಯಾಕಾಶ ನೌಕೆಗೆ ನಿಕಟ ಹೋಲಿಕೆ ಹೊಂದಿದೆ. ಗಣೇಶೋತ್ಸವ ಆಚರಣೆಗಳು ಮಂಗಳವಾರ ಪ್ರಾರಂಭವಾಗುತ್ತಿದ್ದಂತೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು.
ರಾಜ್ಯದ ರಾಜಧಾನಿಯಲ್ಲಿನ ಅನೇಕ ಪ್ರಮುಖ ಗಣೇಶ ಉತ್ಸವ ಸಮಿತಿಗಳು ವಿಶೇಷ ವಿಷಯಗಳ ಮೇಲೆ ದೊಡ್ಡ ಮತ್ತು ವಿಸ್ತಾರವಾಗಿ ವಿನ್ಯಾಸಗೊಳಿಸಿದ ಪೆಂಡಾಲ್ ಗಳನ್ನು ನಿರ್ಮಿಸಿವೆ.
ಚಂದ್ರಯಾನ-3 ಮಿಷನ್ ಅನ್ನು ಬಿಂಬಿಸುವ ಥೀಮ್ ಆಧಾರಿತ ಪೆಂಡಾಲ್ ನಲ್ಲಿರುವ ಪಿಎಸ್‌ಎಲ್‌ವಿ ರಾಕೆಟ್‌ನ ಪ್ರತಿಕೃತಿ 120 ಅಡಿ ಎತ್ತರ ಮತ್ತು 70 ಅಡಿ ಅಗಲವಿದೆ.
ಕೋಲ್ಕತ್ತಾದಿಂದ ಬಂದ ಮೂವತ್ತು ಕುಶಲಕರ್ಮಿಗಳು ಥೀಮ್ ಆಧಾರಿತ ಪೆಂಡಾಲ್ ಸಿದ್ಧಪಡಿಸಲು ಹಗಲು ರಾತ್ರಿ ಶ್ರಮಿಸಿದರು. ಈ ಪ್ಯಾಂಡಲ್ ತಯಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಯೊಬ್ಬರು, ಸಾವಿರಾರು ಬಿದಿರಿನ ಕಂಬಗಳು, ಪ್ಲೈವುಡ್ ಬಳಸಲಾಗಿದೆ ಎಂದು ಹೇಳಿದರು. ‘ಚಂದ್ರಯಾನ-3’ ಮಿಷನ್ ಪೆಂಡಾಲ್ ನಿರ್ಮಾಣ ಕಾರ್ಯಕ್ಕೆ 45 ದಿನ ಬೇಕಾಯಿತು.