ಜಗ್ಗೇಶ್-ಡಾಲಿ ಕಾಮಿಡಿ ಕಿಕ್ : ಹಾಸ್ಯಭರಿತ ಚಿತ್ರ ‘ತೋತಾಪುರಿ -2ʼ ಟ್ರೇಲರ್ ಔಟ್

ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಸಿನಿಮಾ ಸಖತ್ ಕಮಾಲ್ ಮಾಡಿತ್ತು, ಇದೀಗ ‘ತೋತಾಪುರಿ’-2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಇದೀಗ ಗೌರಿ ಗಣೇಶ ಹಬ್ಬದ ದಿನ ಇಂದು ʼತೋತಾಪುರಿ 2ʼ ಟ್ರೇಲರ್ ರಿಲೀಸ್ ಆಗಿದೆ. ಹಾಸ್ಯದ ಕಚಗುಳಿ ಜೊತೆ ನವಿರಾದ ಪ್ರೇಮಕಥೆಯನ್ನು ನಿರ್ದೇಶಕ ವಿಜಯ್ ಪ್ರಸಾದ್ ತೆರೆ ಮೇಲೆ ತರುತ್ತಿದ್ದಾರೆ.

ಸುರೇಶ್ ಆರ್ಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಮೋನಿ ಪ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ನಡಿ ಕೆ ಸುರೇಶ್ ನಿರ್ಮಾಣ ಮಾಡಿರುವ ಕಾಮಿಡಿ ಡ್ರಾಮಾ ಕಥಾಧಾರಿತ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಸೇರಿದಂತೆ ಅದಿತಿ ಪ್ರಭುದೇವ, ಡಾಲಿ ಧನಂಜಯ್, ಹಾಗೂ ಸುಮನ್ ರಂಗನಾಥ್ ನಟಿಸಿದ್ದಾರೆ. ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಅವರ ಜೋಡಿ ಇಲ್ಲಿ ಮೋಡಿ ಮಾಡಲಿದೆ.  ಡಾಲಿ ಧನಂಜಯ್ ಕೂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read