HomeEntertainmentSHOCKING: ಸೆಲ್ಫಿ ತೆಗೆದುಕೊಂಡ ಬೆನ್ನಲ್ಲೇ ನಟನ ಮೇಲೆ ಪುಂಡರ ಹಲ್ಲೆ

SHOCKING: ಸೆಲ್ಫಿ ತೆಗೆದುಕೊಂಡ ಬೆನ್ನಲ್ಲೇ ನಟನ ಮೇಲೆ ಪುಂಡರ ಹಲ್ಲೆ

ಮುಂಬೈ: ‘ಭಾಗ್ಯಲಕ್ಷ್ಮಿ’ ನಟ ಆಕಾಶ್ ಚೌಧರಿ ಅವರನ್ನು ಅಶಿಸ್ತಿನ ಯುವಕರು ರಸ್ತೆಯ ಮೇಲೆ ಹೊಡೆದಿದ್ದಾರೆ. ಆಕಾಶ್ ಚೌಧರಿ ಅವರ ಮೇಲೆ ಮುಂಬೈನಲ್ಲಿ ರಸ್ತೆಯ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.

ಅಶಿಸ್ತಿನ ಯುವಕರು ಆಕಾಶ್ ಮೇಲೆ ಹಲ್ಲೆ ನಡೆಸಿರುವ ವೈರಲ್ ವಿಡಿಯೋ ಸೆಲೆಬ್ರಿಟಿಗಳ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಭಿಮಾನಿಗಳಂತೆ ನಟಿಸುವ ಯುವಕರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಅವರು ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಖಂಡಿಸುವ ಸಂದರ್ಭದಲ್ಲಿ ಅನೇಕ ಬಳಕೆದಾರರು ಆಕಾಶ್‌ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಮೊದಲಿಗೆ ಯುವಕರು ಆಕಾಶ್ ಕಡೆಗೆ ಸೆಲ್ಫಿಗಾಗಿ ವಿನಂತಿಸುತ್ತಾರೆ. ನಂತರ ಅವರು ಅವನನ್ನು ಬಾಟಲಿಗಳಿಂದ ಹೊಡೆಯಲು ಪ್ರಾರಂಭಿಸುತ್ತಾರೆ. ಘಟನೆ ಬಗ್ಗೆ ನೆಟಿಜನ್‌ ಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ಅಭಿಮಾನಿಗಳಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular