HomeKarnatakaBREAKING : ವಂಚನೆ ಕೇಸ್ ಗೆ ಬಿಗ್ ಟ್ವಿಸ್ಟ್ : ಉದ್ಯಮಿ ಗೋವಿಂದಬಾಬು ವಿರುದ್ಧವೇ ‘ಅಭಿನವ...

BREAKING : ವಂಚನೆ ಕೇಸ್ ಗೆ ಬಿಗ್ ಟ್ವಿಸ್ಟ್ : ಉದ್ಯಮಿ ಗೋವಿಂದಬಾಬು ವಿರುದ್ಧವೇ ‘ಅಭಿನವ ಹಾಲಶ್ರೀ’ ದೂರು

ಬೆಂಗಳೂರು : ‘ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್’ 5 ಕೋಟಿ ರೂ ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಗೋವಿಂದಬಾಬು ಪೂಜಾರಿ ವಿರುದ್ಧವೇ ‘ಅಭಿನವ ಹಾಲಶ್ರೀ’ ದೂರು ನೀಡಿದ್ದಾರೆ.

MLA ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಉದ್ಯಮಿ ಗೋವಿಂದಬಾಬು ಮತ್ತು ಆಪ್ತರ ವಿರುದ್ಧ ಅಭಿನವ ಹಾಲಶ್ರೀ ದೂರು ನೀಡಿದ್ದಾರೆ.  ಆಗಸ್ಟ್ 11 ರಂದೇ ಈ ಬಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ಠಾಣೆಗೆ ಅಭಿನವ ಹಾಲಶ್ರೀ ದೂರು ನೀಡಿದ್ದರು ಎಂದು  ಹೇಳಲಾಗುತ್ತಿದೆ.

ಇನ್ನೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿನವ ಹಾಲಶ್ರೀ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕನನ್ನ ವಿಚಾರಣೆ ನಡೆಸಿದರೆ ಹಾಲಶ್ರೀ ಶ್ರೀಗಳ ಸುಳಿವು ಸಿಗುವ ಸಾಧ್ಯಯಿರುವ ಹಿನ್ನೆಲೆ ಆತನನ್ನು ವಶಕ್ಕೆ ಪಡೆದಿದ್ದಾರೆ. ಇದರ ನಡುವೆ ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಉದ್ಯಮಿ ಗೋವಿಂದಬಾಬು ಮತ್ತು ಆಪ್ತರ ವಿರುದ್ಧ ಅಭಿನವ ಹಾಲಶ್ರೀ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular