alex Certify ಆಸ್ತಿ ಪಡೆದ ಬಳಿಕ ಪೋಷಕರನ್ನು ನಿರ್ಲಕ್ಷಿಸುತ್ತಿದ್ದಾರಾ ಮಕ್ಕಳು ? ಈ ಕಾನೂನಿನ ಮೂಲಕ ಮರಳಿ ಪಡೆಯಬಹುದು ಸ್ವತ್ತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ಪಡೆದ ಬಳಿಕ ಪೋಷಕರನ್ನು ನಿರ್ಲಕ್ಷಿಸುತ್ತಿದ್ದಾರಾ ಮಕ್ಕಳು ? ಈ ಕಾನೂನಿನ ಮೂಲಕ ಮರಳಿ ಪಡೆಯಬಹುದು ಸ್ವತ್ತು…!

ಮಕ್ಕಳ ಭವಿಷ್ಯ ಭದ್ರವಾಗಿಸಲು ಪೋಷಕರು ತಮ್ಮ ಸಂಪೂರ್ಣ ಜೀವನವನ್ನೇ ಮೀಸಲಿಡುತ್ತಾರೆ . ಆದರೆ ವೃದ್ಧಾಪ್ಯದಲ್ಲಿ ಬಹುತೇಕ ಮಕ್ಕಳು ತಮ್ಮ ಪೋಷಕರಿಗೆ ಕಿರುಕುಳ ನೀಡುತ್ತಾರೆ. ಪೋಷಕರ ವೃದ್ಧಾಪ್ಯದಲ್ಲಿ ಅವರನ್ನು ಮನೆಯಿಂದ ಹೊರ ಹಾಕುವ ಮಕ್ಕಳು ಸಹ ಇದ್ದಾರೆ. ಆದರೆ ಇದಕ್ಕೊಂದು ಕಾನೂನಿದೆ. ಈ ಕಾನೂನಿನ ಮೂಲಕ ಪೋಷಕರು ತಮ್ಮ ಹಕ್ಕುಗಳನ್ನು ಹಿಂಪಡೆಯಬಹುದಾಗಿದೆ. ಆದರೆ ಅನೇಕರಿಗೆ ಈ ಬಗ್ಗೆ ಮಾಹಿತಿ ಇಲ್ಲದೇ ವೃದ್ಧಾಪ್ಯದಲ್ಲಿ ಪಡಬಾರದ ಕಷ್ಟ ಪಡುತ್ತಾರೆ.

ಪೋಷಕರು ತಮ್ಮ ಆಸ್ತಿಯನ್ನು ಮಕ್ಕಳಿಂದ ವಾಪಸ್ ಪಡೆಯುವುದು ಹೇಗೆ..?

ಹಿರಿಯ ನಾಗರಿಕರ ಕಾಯ್ದೆಯಡಿಯಲ್ಲಿ, ಒಬ್ಬ ಹಿರಿಯ ನಾಗರಿಕನು ತನ್ನ ಮಗುವಿಗೆ ಆಸ್ತಿಯನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸಲೇಬೇಕು ಎಂಬ ಕಂಡಿಷನ್​ನೊಂದಿಗೆ ಉಡುಗೊರೆ ರೂಪದಲ್ಲಿ ನೀಡಬಹುದು ಅಥವಾ ವರ್ಗಾಯಿಸಬಹುದು. ಹಿರಿಯ ನಾಗರಿಕರ ರಕ್ಷಣೆಗಾಗಿ ಈ ಕಾಯ್ದೆಯನ್ನು 2007ರಲ್ಲಿ ಜಾರಿಗೆ ತರಲಾಗಿದೆ. ಒಂದು ವೇಳೆ ಆಸ್ತಿ ವರ್ಗಾವಣೆ ಆದ ಬಳಿಕ ಮಕ್ಕಳು ಪೋಷಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾದಲ್ಲಿ ಆ ಆಸ್ತಿಯನ್ನು ಹಿರಿಯ ನಾಗರಿಕರು ಮರಳಿ ಪಡೆಯಬಹುದಾಗಿದೆ.

ಆಸ್ತಿಯನ್ನು ಮರಳಿ ಪಡೆಯಬೇಕು ಎಂದರೆ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಮಕ್ಕಳಿಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಈ ಷರತ್ತನ್ನು ಬಾಂಡ್ ಪೇಪರ್​ನಲ್ಲಿ ದಾಖಲಿಸಿರಬೇಕು. ಒಂದು ವೇಳೆ ಬಾಂಡ್​ನಲ್ಲಿದ್ದ ಯಾವುದೇ ಷರತ್ತುಗಳನ್ನು ಮಕ್ಕಳು ಉಲ್ಲಂಘನೆ ಮಾಡಿದಲ್ಲಿ ಈ ಉಡುಗೊರೆಯನ್ನು ಅಮಾನ್ಯವೆಂದು ಘೋಷಣೆ ಮಾಡುವ ಅಧಿಕಾರ ಹಿರಿಯ ನಾಗರಿಕರಿಗೆ ಇರುತ್ತದೆ. ಆಗ ಮಕ್ಕಳು ಪೋಷಕರಿಂದ ಪಡೆದ ಆಸ್ತಿಯನ್ನು ಅವರಿಗೆ ಹಿಂದಿರುಗಿಸಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...